ಗುರುವಾರ , ಏಪ್ರಿಲ್ 15, 2021
22 °C

ಸಾಗರ್ ಶೀಘ್ರ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮು ನಿರ್ಮಿಸುತ್ತಿರುವ `ಸಾಗರ್~ ಚಿತ್ರಕ್ಕೆ ಈ ವಾರ ಸೆನ್ಸಾರ್‌ನಿಂದ ಪ್ರಮಾಣ ಪತ್ರ ಸಿಕ್ಕರೆ ಮುಂದಿನವಾರ ಬಿಡುಗಡೆಯಾಗಲಿದೆ.ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ, ಕೃಷ್ಣಕುಮಾರ್ ಛಾಯಾಗ್ರಹಣ, ಕವಿರಾಜ್ ಸಾಹಿತ್ಯ, ಗುರುಕಿರಣ್ ಸಂಗೀತ, ಮೋಹನ್ ಬಿ.ಕೆರೆ ಕಲೆ, ಸೌಂದರ್‌ರಾಜ್ ಸಂಕಲನ, ಚಿನ್ನಿ ಪ್ರಕಾಶ್, ರಾಮು ನೃತ್ಯ, ಪಳನಿರಾಜ್, ರವಿವರ್ಮ, ಕೆ.ಡಿ.ವೆಂಕಟೇಶ್ ಸಾಹಸ ಇದೆ. ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ಎಂ.ಡಿ. ಶ್ರಿಧರ್ ಅವರದು.ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ರಾಧಿಕಾ ಪಂಡಿತ್, ಸಂಜನಾ, ಹರಿಪ್ರಿಯಾ, ದೇವ್‌ಗಿಲ್ (ಮಗಧೀರ ಖ್ಯಾತಿ) ಅವಿನಾಶ್, ಶರತ್ ಲೋಹಿತಾಶ್ವ ಮುಂತಾದವರಿದ್ದಾರೆ.

`ಬೀರ~ನಿಗೆ ಹಿನ್ನೆಲೆ ಸಂಗೀತ

ಅಯೂಬ್ ಪಾರ್ಥನಳ್ಳಿ ನಿರ್ಮಿಸುತ್ತಿರುವ `ಬೀರ~ ಚಿತ್ರಕ್ಕೆ ಹಿನ್ನಲೆ ಸಂಗೀತ ಅಳವಡಿಸಲಾಗುತ್ತಿದೆ. ಮನ್ಸೂರ್ ಅಹ್ಮದ್ ಚಿತ್ರದ ಸಂಗೀತ ನಿರ್ದೇಶಕರಾಗಿದ್ದು ಹಿನ್ನಲೆ ಸಂಗೀತವನ್ನು ಅರ್ಜುನ್ ಜನ್ಯ ನೀಡುತ್ತಿದ್ದಾರೆ.

 

ಸಂಜಯ್ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಸತ್ಯ ಅಭಿನಯಿಸುತ್ತಿದ್ದಾರೆ. ಶುಭಾ ಪೂಂಜಾ, ರೂಪಿಕಾ ನಾಯಕಿಯರು. ಉಳಿದಂತೆ ಸಾಧು ಕೋಕಿಲಾ, ಸತ್ಯಜಿತ್, ಸುಚೀಂದ್ರ ಪ್ರಸಾದ್, ರಾಮಪ್ರಸಾದ್ ಅಭಿನಯಿಸಿದ್ದಾರೆ.ದೇವರಾಜ್ ಸಂಭಾಷಣೆ, ಬಾಲ ಗಣೇಶನ್ ಛಾಯಾಗ್ರಹಣ ಗಿರೀಶ್‌ಕುಮಾರ್ ಸಂಕಲನ, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ಹರ್ಷ ನೃತ್ಯ ನಿರ್ದೇಶನ ಚಿತ್ರಕ್ಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.