ಶನಿವಾರ, ಮೇ 8, 2021
26 °C

ಸಾಗರ: ಕುಡಿಯುವ ನೀರಿಗೆ ರೂ 12.15 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ತಾಲ್ಲೂಕಿಗೆ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಮೊದಲಾದ ಯೋಜನೆಗಳ ಅಡಿಯಲ್ಲಿ ್ಙ 12.15 ಕೋಟಿ ಮಂಜೂರಾಗಿದೆ ಎಂದು ಶಾಸಕ ಎಚ್. ಹಾಲಪ್ಪ ತಿಳಿಸಿದರು.ಗ್ರಾಮೀಣ ನೀರು ಸರಬರಾಜು ಯೋಜನೆ, ಅಂತರ್ಜಲ ಅಭಿವೃದ್ಧಿ ಕಾಮಗಾರಿಗಳು ಇದರಲ್ಲಿ ಒಳಗೊಂಡಿವೆ ಎಂದು ಭಾನುವಾರ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ನೀರಿನ ಅಗತ್ಯ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವ 17 ಕಾಮಗಾರಿಗಳನ್ನು ್ಙ 1.98 ಕೋಟಿ ವೆಚ್ಚದಲ್ಲಿ ಅಂದವಳ್ಳಿ, ಚರಂತಿ ಹೊಸಕೊಪ್ಪ, ಗುಂಜನೂರು, ಹೊರಬೈಲುಕೊಪ್ಪ, ಕೈಸೋಡಿ, ಕೆರೆಕೊಪ್ಪ. ಕೋಣನಮನೆ, ಕ್ಯಾಸನೂರು, ಶ್ಯಾಡಲಕೊಪ್ಪ, ಬಾಸೂರು, ಬೆನ್ನೂರು, ಗುಡವಿ, ಹುರುಳಿಕೊಪ್ಪ, ಕುಣೇತೆಪ್ಪ, ತೊರವಂದ, ಉದ್ರಿ, ದೊಡ್ಡಿಕೊಪ್ಪದಲ್ಲಿ ಕೈಗೊಳ್ಳಲಾಗುವುದು.ಅಂತರ್ಜಲ ಅಭಿವೃದ್ಧಿ ಅಡಿಯಲ್ಲಿ 25 ಕಾಮಗಾರಿಗಳು ್ಙ 5.88 ಕೋಟಿ ವೆಚ್ಚದಲ್ಲಿ ಚಿಕ್ಕಾವಲಿ, ಹೆಗ್ಗೋಡು, ಕುಪ್ಪೆ, ಕೊಡಕಣಿ, ಗುಡ್ಡೇಕೊಪ್ಪ, ಪುರ, ಡಿ.ಹೊಸಕೊಪ್ಪ, ಕಡಸೂರು, ಭದ್ರಾಪುರ, ಮಳಲಗದ್ದೆ, ಉಳವಿ, ಕಾನಳ್ಳಿ, ಬೆಣ್ಣೆಗೆರೆ, ಭೈರೇಕೊಪ್ಪ, ಕುಪ್ಪೆ, ಹೆಸರಿ, ಲಕ್ಕವಳ್ಳಿ, ಸೂರಣಗಿ, ದುಗ್ಗಳ್ಳಿ, ಉಳವಿ (2), ಮಂಗರಸಿಕೊಪ್ಪ, ಜಡೆ, ರಾಮಗೊಂಡನಕೊಪ್ಪ, ಹಲಸಿನಕೊಪ್ಪದಲ್ಲಿ ಸೌಲಭ್ಯ ನೀಡಲಿವೆ.ರೂ. 1.63 ಕೋಟಿ ವೆಚ್ಚದಲ್ಲಿ 9 ಓವರ್‌ಹೆಡ್ ಟ್ಯಾಂಕ್‌ಗಳು ನೆಗವಾಡಿ, ಭಾರಂಗಿ, ಶಿಗ್ಗಾ, ಉಳವಿ, ಗುಡವಿ. ಆನವಟ್ಟಿ, ಕಮರೂರು, ದ್ವಾರಹಳ್ಳಿ, ಕಮರೂರು (ತೆಲಗುಂದ) ಗ್ರಾಮಗಳಲ್ಲಿ ನಿರ್ಮಾಣ ಆಗಲಿವೆ.್ಙ 81ಲಕ್ಷದಲ್ಲಿ ಪೈಪ್‌ಲೈನ್, ್ಙ 41 ಲಕ್ಷದಲ್ಲಿ 41 ಶಾಲೆಗಳಿಗೆ ಕುಡಿಯುವ ನೀರು ಒದಗಿಸಲಿದ್ದು, ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗಾಗಿ ್ಙ 1.43 ಕೋಟಿ ವ್ಯಯಿಸಲಾಗುವುದು ಎಂದು ವಿವರಿಸಿದರು.ಪ್ರಗತಿ ಅನುಷ್ಠಾನದ ಕುರಿತು ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಜಿಲ್ಲೆಯ ಬೇರೆ ಯಾವುದೇ ತಾಲ್ಲೂಕಿಗೆ ಕುಡಿಯುವ ನೀರಿಗಾಗಿ ಇಷ್ಟು ಪ್ರಮಾಣದ ಹಣ ಬಿಡುಗಡೆ ಆಗಿಲ್ಲ ಎಂದರು.ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಆರ್. ಪಾಟೀಲ್, ಎಪಿಎಂಸಿ ಅಧ್ಯಕ್ಷ ಗಜಾನನರಾವ್, ಜಿ.ಪಂ. ಎಇಇ ಸಿದ್ಧನಗೌಡ, ನಿರಂಜನ್, ರೇವಣಕುಮಾರ್, ಪಾಣಿರಾಜಪ್ಪ, ಗೌರಮ್ಮ ಭಂಡಾರಿ, ಮಹೇಶ್‌ಗೌಳಿ, ಡಾಕಪ್ಪ ಇತರರು ಇದ್ದರು.    

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.