ಸಾಟಿ ಇಲ್ಲದ ಅಮ್ಮನ ವಾತ್ಸಲ್ಯ: ನಟಿಯರ ನಮನ

7

ಸಾಟಿ ಇಲ್ಲದ ಅಮ್ಮನ ವಾತ್ಸಲ್ಯ: ನಟಿಯರ ನಮನ

Published:
Updated:
ಸಾಟಿ ಇಲ್ಲದ ಅಮ್ಮನ ವಾತ್ಸಲ್ಯ: ನಟಿಯರ ನಮನ

ನವದೆಹಲಿ (ಪಿಟಿಐ):  `ತಾಯಿ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ~ ಎಂದಿರುವ ಬಾಲಿವುಡ್‌ನ ಹೆಸರಾಂತ ನಟಿ- ನಟಿಯರು, ಸದಾ ತಮ್ಮನ್ನು ಬೆಂಬಲಿಸುವ ಅಮ್ಮಂದಿರಿಗೆ ವಂದನೆ ಸಲ್ಲಿಸುವುದಾಗಿ `ತಾಯಂದಿರ ದಿನ~ದ ಹಿನ್ನೆಲೆಯಲ್ಲಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.`ಜಗತ್ತಿನಲ್ಲಿರುವ ಎಲ್ಲ ತಾಯಂದಿರಿಗೆ ಕೃತಜ್ಞತೆ ಸಲ್ಲಿಸಲು ಮತ್ತು ಅವರ ಬಗ್ಗೆ ಯೋಚಿಸಲು ಕೇವಲ ಒಂದು ದಿನ ಸಾಲದು. ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೆ ಆಶ್ಚರ್ಯ ಮತ್ತು ವಿಸ್ಮಯದ ಸಂಗತಿ~ ಎಂದು ನಟಿ ಬಿಪಾಷಾ ಬಸು ಅಭಿಪ್ರಾಯಪಟ್ಟಿದ್ದಾರೆ.`ತಾಯಂದಿರ ದಿನವನ್ನು ಮಗಳು ಸೈರಾ ಜತೆ ಆಚರಿಸುತ್ತಿದ್ದೇನೆ. ನನ್ನ ಗುರುಗಳ ಹುಟ್ಟು ಹಬ್ಬವೂ ಇದೇ ದಿನ ಆಗಿರುವುದು ವಿಶೇಷ~ ಎಂದು ಜನವರಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಲಾರಾ ದತ್ತಾ ಅವರು ಹೇಳಿದ್ದಾರೆ.`ನನ್ನ ಪ್ರೀತಿಯ ಅಮ್ಮ ಮತ್ತು ಇತರ ಎಲ್ಲಾ ತಾಯಂದಿರಿಗೆ ಶುಭಾಶಯಗಳನ್ನು ತಿಳಿಸುತ್ತೇನೆ. ಅವರೆಲ್ಲರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ~ ಎಂದು ನಟಿ ಅಮೃತಾ ಅರೋರಾ ಹೇಳಿದ್ದಾರೆ.`ನನ್ನ ಮಕ್ಕಳು ನನಗಾಗಿ ಸ್ವತಃ ಅವರೇ ರೂಪಿಸಿದ ಉಡುಗೊರೆಯನ್ನು ನೀಡಿದ್ದಾರೆ~ ಎಂದು  ನಟಿ ರವೀನಾ ಟಂಡನ್ ಟ್ವೀಟ್ ಮಾಡಿದ್ದಾರೆ.`ನನ್ನ ನಾಲ್ಕೂವರೆ ವರ್ಷದ ಮಗ ರಣಬೀರ್ ವರ್ಧನ್ ನನಗಾಗಿ ಮತ್ತು ಆತನ ಅಜ್ಜಿಗಾಗಿ  ಶುಭಾಶಯ ಕೋರುವ ಕಾರ್ಡ್ ಮಾಡಿದ್ದಾನೆ~ ಎಂದು ರವೀನಾ ಬರೆದಿದ್ದಾರೆ.`ನನ್ನ ಮಗಳೂ ಕೂಡ ಕಳೆದ ಮೂರು ದಿನಗಳಿಂದ ತಯಾರಿ ನಡೆಸಿದ್ದು ಸುಂದರವಾದ ಪೆಟ್ಟಿಗೆ ಮಾಡಿದ್ದಾಳೆ~ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.`ಮಾ ತುಝೆ ಸಲಾಮ್~ (ತಾಯಿ ನಿನಗೆ ಕೈ ಮುಗಿಯುತ್ತೇನೆ) ಎಂದು ಸೋನಾಕ್ಷಿ ಸಿನ್ಹಾ ಅವರು ಟ್ವೀಟ್ ಮಾಡಿದ್ದರೆ, ಇತ್ತೀಚಿಗಷ್ಟೇ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಮತ್ತೊಬ್ಬ ನಟಿ ಸೆಲಿನಾ ಜೇಟ್ಲಿ, `ನಮ್ಮ ಬಹುತೇಕ ತಾಯಂದಿರು ಹಾಸ್ಯ ಪ್ರಜ್ಞೆ ಹೊಂದಿದ್ದಾರೆ ಮತ್ತು ನಮಗೆ ಕಲಿಸಿಕೊಟ್ಟಿದ್ದಾರೆ~ ಎಂದು ಅಭಿಪ್ರಾಯ ಪಟ್ಟಿದ್ದಾರೆ.ಕೇವಲ ನಟಿಯರು ಮಾತ್ರ ತಾಯಂದಿಯರಿಗೆ ಕೃತಜ್ಞತೆ ಸಲ್ಲಿಸ ಬೇಕೆಂದೇನೂ ಇಲ್ಲ, ನಟರಾದವರೂ ಕೂಡ ತಮ್ಮ ಜೀವನದ ಅತ್ಯಂತ ಪ್ರೀತಿಯ, ಮಹತ್ವದ ವ್ಯಕ್ತಿಗೆ ಶುಭಾಶಯ ತಿಳಿಸಬಹುದು ಎಂದು ಹೇಳಿದ್ದಾರೆ.ಎಲ್ಲ ತಾಯಂದಿರಿಗೆ ಪ್ರೀತಿಪೂರ್ವಕ ಶುಭಾಶಯ ತಿಳಿಸಿರುವ ಆರ್. ಮಾಧವನ್, `ನಿಮ್ಮ ಸ್ಥಾನವನ್ನು ಬೇರೆ ಯಾರಿಂದಲೂ ತುಂಬಿಸಲು ಸಾಧ್ಯವಿಲ್ಲ~ ಎಂದು ಹೇಳಿದ್ದಾರೆ.

ಇದೇ ರೀತಿ ಚಿತ್ರ ನಿರ್ಮಾಪಕ ಶೇಖರ್ ಕಪೂರ್, ನಟ ಅರ್ಜುನ್ ರಾಮ್‌ಪಾಲ್, ಅನುಪಮ್ ಖೇರ್ ಕೂಡ ಶುಭಾಶಯ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry