`ಸಾತ್ವಿಕ ಪ್ರಜ್ಞೆಗೆ ನಾಟಕ ಪ್ರೇರಣೆ'

7

`ಸಾತ್ವಿಕ ಪ್ರಜ್ಞೆಗೆ ನಾಟಕ ಪ್ರೇರಣೆ'

Published:
Updated:

ಜಾವಗಲ್: ನಾಟಕಗಳು ಸಾಮಾಜಿಕ ಮೌಲ್ಯ, ಸಾತ್ವಿಕ ಪ್ರಜ್ಞೆ, ಸಮಾಜದ ಒಳಿತಿಗೆ ಪ್ರೇರಣೆ ನೀಡುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ  ಹೇಳಿದರು.ಪಟ್ಟಣದ ಬಯಲು ರಂಗ ಮಂದಿರ ದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಗ್ರಾಮೀಣ ನಾಟಕೋತ್ಸವದ ಸಮಾ ರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನಾಟಕಗಳು ಜನರಿಗೆ ಉತ್ತಮ ಸಂದೇಶಗಳನ್ನು ನೀಡುತ್ತವೆ ಎಂದು ಹೇಳಿದರು.ಸಾಹಿತಿ ಚಟ್ನಹಳ್ಳಿ ಮಹೇಶ್ ಮಾತನಾಡಿ, ನಾಟಕಗಳಿಂದ ಮಹಾನ್ ಗ್ರಂಥಗಳು, ಸಾಹಿತ್ಯ, ಸಂಸ್ಕೃತಿ ಪರಂಪರೆ ಹಾಗು ಮಹಾನ್ ಪುರುಷರ ಜೀವನ ಪರಿಚಯವಾಗುತ್ತದೆ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜನಾರ್ಧನ್, ಬೇಲೂರು ಪುರಸಭಾ ಮಾಜಿ ಅಧ್ಯಕ್ಷ ಬಿ.ಸಿ.ಮಂಜು ನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜಶೇಖರ್, ಸಂಪಾದಕ ರವಿ ನಾಕಲಗೂಡು, ಶೇಖರ್ ಮಾತ ನಾಡಿದರು.ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಪ್ರಸನ್ನ ಕುಮಾರ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ನಿರ್ದೇಶಕ ಕಲ್ಲಹಳ್ಳಿ ನಾಗರಾಜು, ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜೆ.ಎಸ್.ಸೋಮೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಪಾ ಧ್ಯಕ್ಷ ಸತೀಶ್, ಕರಾವೇ ಹೋಬಳಿ ಘಟಕದ ಗೌರವ ಅಧ್ಯಕ್ಷ ರವಿಶಂಕರ್, ತಾಲ್ಲೂಕು ಜಾನಪದ ಪರಿಷತ್ ಉಪಾಧ್ಯಕ್ಷ ಆನಂದ್, ಹರೀಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry