ಸಾಧಕರ ಆತ್ಮಾಹುತಿ: ತನಿಖೆಗೆ ವಿಶೇಷ ತಂಡ ರಚನೆ

7

ಸಾಧಕರ ಆತ್ಮಾಹುತಿ: ತನಿಖೆಗೆ ವಿಶೇಷ ತಂಡ ರಚನೆ

Published:
Updated:

ಜನವಾಡ (ಬೀದರ್): ತಾಲ್ಲೂಕಿನ ಚೌಳಿ ಮಠದ ಮೂವರು ಸಾಧಕರ ಆತ್ಮಾಹುತಿ ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ.ಬೀದರ್ ಡಿವೈಎಸ್‌ಪಿ ವಿ.ಎನ್. ಜ್ಯೋತಿ ಅವರ ನೇತೃತ್ವದಲ್ಲಿ ರಚಿಸಿದ ತಂಡ ಈಗಾಗಲೇ ತನಿಖೆ ಕೈಗೆತ್ತಿಕೊಂಡಿದೆ.ಮಠದಲ್ಲಿನ ಕ್ಯಾಮೆರಾ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದು, ಅದರಲ್ಲಿ ಆತ್ಮಾಹುತಿ ಬಗೆಗೆ ಖುದ್ದು ಸಾಧಕರ ಸಂದೇಶ ಇರುವುದು ದೃಢಪಟ್ಟಿದೆ. ಮೂವರು ಸಾಧಕರು ಸಾವಿಗೆ ಮೊದಲು ಬರೆದಿಟ್ಟಿದ್ದ ಪತ್ರದಲ್ಲಿ ಉಲ್ಲೇಖಿಸಿರುವ ಸಂಗತಿಗಳೇ ಕ್ಯಾಮೆರಾದಲ್ಲಿ ಇವೆ ಎಂದು ಬೀದರ್ ಗ್ರಾಮೀಣ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಆನಂದ ಕಬ್ಬೂರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry