ಭಾನುವಾರ, ಏಪ್ರಿಲ್ 11, 2021
25 °C

ಸಾಧಕರ ಆದರ್ಶ ಪಾಲನೆ ಅಗತ್ಯ: ಕಾಶಿನಾಥರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಸಾಧನೆಗೆ ಸಾಧಕರ ಆದರ್ಶ ಪಾಲನೆ ಅತ್ಯವಶ್ಯಕ ಎಂದು ಹಿರಿಯ ಸಾಹಿತಿ ಕಾಶಿನಾಥರೆಡ್ಡಿ ಅಭಿಪ್ರಾಯಪಟ್ಟರು. ಇಲ್ಲಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜನಲ್ಲಿ ಶನಿವಾರ ನಡೆದ ಕಾಲೇಜು ಕರ್ನಾಟಕ ಕನ್ನಡ ಸಂಘ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಸಾಧಕರಾದ ಕಲ್ಪನಾ ಚಾವ್ಲಾ, ಮೇಧಾ ಪಾಟ್ಕರ್, ಪಿ.ಟಿ.ಉಷಾ, ಸುನೀತಾ ವಿಲಿಯಮ್ಸ ಮೊದಲಾದವರ ಸಾಧನೆಯ ಹಿಂದಿನ ಗುಟ್ಟು ಅರಿತುಕೊಳ್ಳಲು ಅವರ ಕುರಿತು ಪ್ರಕಟಗೊಂಡಿರುವ ಪುಸ್ತಕಗಳ ಅಧ್ಯಯನ ಅತ್ಯಂತ ಸರಳ ಮಾರ್ಗ ಎಂದು ರೆಡ್ಡಿ ಸಲಹೆ ನೀಡಿದರು. ಕಾಲೇಜಿನಲ್ಲಿ ಕನ್ನಡ ಸಂಘ ಸ್ಥಾಪಿಸಿರುವುದು ಆರೋಗ್ಯಕರ ಬೆಳವಣಿಗೆ ಎಂದ ಅವರು ಓದಿನ ಜೊತೆಗೆ ಸಂಘದ ಅಡಿಯಲ್ಲಿ ಸಾಹಿತ್ಯ ಕೃಷಿ, ನಾಡಿನ ರಕ್ಷಣೆಯ ಹಿನ್ನೆಲೆಯಲ್ಲಿ ನಿರಂತರ ಚಟಿವಟಿಕೆ ನಡೆಸಿಕೊಂಡು ಹೋಗಬೇಕು ಎಂದರು.ಇದೆಲ್ಲದರ ಜೊತೆಗೆ ರಾಷ್ಟ್ರೀಯ ಸೇವಾ ಯೋಜನೆ ಘಟಕ ಈ ಕಾಲೇಜನಲ್ಲಿ ಇರುವ ಕಾರಣ ಘಟಕದ ಅಧಿಕಾರಿ ವೀರಣ್ಣ ಕಮಲಾಪೂರ ಮಕ್ಕಳಲ್ಲಿ ಸೇವಾ ಮನೋಭಾವನೆ ಕುರಿತು ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದು. ವೇದಿಕೆಯಲ್ಲಿ ಹೊಸದಾಗಿ ಪ್ರಥಮ ಪಿ.ಯು.ಸಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿನಿಯರು ಸ್ವಾಗತಿಸಿದರು.ಅಧ್ಯಕ್ಷತೆ ವಹಿಸಿದ್ದ ಮವಿದ್ಯಾಲಯ ಪ್ರಭಾರ ಪ್ರಾಚಾರ್ಯ ಮಹಾದೇವಪ್ಪ ಎಸ್.ಉಪ್ಪಿನ್ ವಿದ್ಯಾಲಯದ ಸಾಧನೆಗಳ ಕುರಿತು ವಿವರಿಸಿ, ಎದುರಿಸುತ್ತಿರುವ ಕೆಲವು ಸಮಸ್ಯೆಗಳ ಕುರಿತು ವಿವರಿಸಿದರು. ಉಪನ್ಯಾಸಕ ಬಿ.ಆರ್.ಬಿರಾದಾರ, ಗೋಖಲೆ, ವೀರಣ್ಣ ಕಮಲಾಪೂರ, ಪರಮೇಶ್ವರ ಧನ್ನಿ ಉಪಸ್ಥಿತರಿದ್ದರು.

ಲಕ್ಷ್ಮಿ ಪ್ರಾರ್ಥಿಸಿದರು. ಕಲಾವತಿ ಸ್ವಾಗತಿಸಿದರು. ಕೀರ್ತಿ ನಿರೂಪಿಸಿದರೆ, ರಾಣಿ ವಂದಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.