ಸಾಧಕ ಶಾಲೆ ಸಾಧಕ ಶಿಕ್ಷಕ ಪ್ರಶಸ್ತಿ ಪ್ರದಾನ 6ಕ್ಕೆ

7

ಸಾಧಕ ಶಾಲೆ ಸಾಧಕ ಶಿಕ್ಷಕ ಪ್ರಶಸ್ತಿ ಪ್ರದಾನ 6ಕ್ಕೆ

Published:
Updated:

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಪ್ರೌಢಶಾಲೆಗಳಿಗೆ ನೀಡುತ್ತಿರುವ ‘ಸಾಧಕ ಶಾಲೆ’ ‘ಸಾಧಕ ಶಿಕ್ಷಕ’ ಪ್ರಶಸ್ತಿಗಳನ್ನು ಇದೇ 6ರಂದು ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜ್ಯುಬೀಲಿ ಸಭಾಭವನದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಪ್ರದಾನ ಮಾಡಲಿದ್ದಾರೆ.ಶಾಸಕ ರಘುಪತಿ ಭಟ್ ಪ್ರಾಯೋಜಕತ್ವದಲ್ಲಿ ಕೊಡಮಾಡುವ ‘ಸಾಧಕ ಶಿಕ್ಷಕ’ ಪ್ರಶಸ್ತಿಗೆ ಆಯ್ಕೆ ಸಮಿತಿಯ ಸಭೆಯು ಮಂಗಳವಾರ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಡಾ.ಬಿ.ವಿ.ಮಹಿದಾಸ್ ಅಧ್ಯಕ್ಷತೆಯಲ್ಲಿ ನಡೆದಿದ್ದು ಆ ಸಭೆಯಲ್ಲಿ ಇದನ್ನು ತೀರ್ಮಾನಿಸಲಾಗಿದೆ.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಸಂತ ಶೆಟ್ಟಿ ಹಾಗೂ ನಾಗೇಶ್ ಶಾನುಭಾಗ್, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್‌ಕುಮಾರ್ ಶೆಟ್ಟಿ, ವಳಕಾಡು ಪ್ರೌಢಶಾಲಾ ಮುಖ್ಯಶಿಕ್ಷಕ ಅಶೋಕ್ ಕಾಮತ್, ಬ್ರಹ್ಮಾವರ ಸರ್ಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ತಾರಾದೇವಿ, ಬಾಲಕಿಯರ ಸರ್ಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ಸುರೇಶ್ ತುಂಗಾ, ನಿವೃತ್ತ ಮುಖ್ಯಶಿಕ್ಷಕ ಎಸ್.ವಿ.ಭಟ್ ಇವರನ್ನು ಒಳಗೊಂಡ ಸಮಿತಿಯು ಶಾಲೆ ಹಾಗೂ ಶಿಕ್ಷಕರ ಪಟ್ಟಿಯನ್ನು ಅಂತಿಮಗೊಳಿಸಿದೆ.ಅತ್ಯುತ್ತಮ ಫಲಿತಾಂಶಕ್ಕಾಗಿ ಚಿನ್ನ ಹಾಗೂ ಬೆಳ್ಳಿ ಪದಕ (ಪ್ರಾಢಶಾಲಾ ವಿಭಾಗ)ಚಿನ್ನ-ಟಿಎಂಎ ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕುಂಜಿಬೆಟ್ಟು, ಉಡುಪಿ. ಬೆಳ್ಳಿ- ಎಸ್.ಎಂ.ಎಸ್. ಇಂಗ್ಲಿಷ್ ಮಾಧ್ಯಮ ಹೈಸ್ಕೂಲ್ ಬ್ರಹ್ಮಾವರ ಮತ್ತು ಶ್ರೀನಿಕೇತನ ಪ್ರೌಢಶಾಲೆ ಮಟಪಾಡಿ, ಬ್ರಹ್ಮಾವರ.  ಅತ್ಯುತ್ತಮ ಶಾಲಾ ಫಲಿತಾಂಶಕ್ಕಾಗಿ ಪದಕ-ಪದವಿಪೂರ್ವ ಶಿಕ್ಷಣ

ವಿಜ್ಞಾನ ವಿಭಾಗ: ಚಿನ್ನ-ಬಾಲಕಿಯರ ಸರ್ಕಾರಿ ಪ.ಪೂ.ಕಾಲೇಜು, ಉಡುಪಿ, ಬೆಳ್ಳಿ-ಸರ್ಕಾರಿ ಪ.ಪೂ.ಕಾಲೇಜು ಉಡುಪಿ.

ವಾಣಿಜ್ಯ ವಿಭಾಗ: ಚಿನ್ನ-ಬಾಲಕಿಯರ ಸರ್ಕಾರಿ ಪ.ಪೂ.ಕಾಲೇಜು, ಉಡುಪಿ, ಬೆಳ್ಳಿ-ಸರ್ಕಾರಿ ಪ.ಪೂ.ಕಾಲೇಜು ಕೊಕ್ಕರ್ಣೆ.

ಕಲಾ ವಿಭಾಗ: ಚಿನ್ನ-ಸರ್ಕಾರಿ ಪ.ಪೂ.ಕಾಲೇಜು ಕೊಕ್ಕರ್ಣೆ. ಬೆಳ್ಳಿ-ಸರ್ಕಾರಿ ಪ.ಪೂ.ಕಾಲೇಜು, ಬ್ರಹ್ಮಾವರ.

ಸಾಧಕ ಶಿಕ್ಷಕ ಪ್ರಶಸ್ತಿ: ಕನ್ನಡ ಮಾಧ್ಯಮ-ಪ್ರೌಢಶಾಲಾ ವಿಭಾಗ, ರಾಮಕೃಷ್ಣ ಬಿ.ನಾಯಕ್, ಬಾಲಕಿಯರ ಪ.ಪೂ.ಕಾಲೇಜು ಉಡುಪಿ, ಎಚ್.ಎನ್.ವೆಂಕಟೇಶ್, ಟಿಎಂಎ ಪೈ ಪ್ರೌಢಶಾಲೆ, ಕಲ್ಯಾಣಪುರ, ಸವಿತಾದೇವಿ ಶಾಂತಿ, ವಳಕಾಡು ಪ್ರೌಢಶಾಲೆ, ಉಡುಪಿ, ಚಂದ್ರಾವತಿ ಕೆ. ಸರ್ಕಾರಿ ಪ.ಪೂ.ಕಾಲೇಜು ಕೊಕ್ಕರ್ಣೆ, ದೇವದಾಸ ಶೆಟ್ಟಿ, ನಿಟ್ಟೂರು ಪ್ರೌಢಶಾಲೆ, ಉಡುಪಿ.ರೇವತಿ ಪಿ.ಡಿ., ಟಿಎಂಎ ಪೈ ಪ್ರೌಢಶಾಲೆ, ಕಲ್ಯಾಣಪುರ, ಅಶೋಕ್ ಕಾಮತ್, ಸುನೀತಾ, ಸಂಧ್ಯಾರಾಣಿ, ಮಾಯಾ ಎಸ್., ವಳಕಾಡು ಪ್ರೌಢಶಾಲೆ, ಉಡುಪಿ, ಲಕ್ಷ್ಯಾದಿನಿ ಹಾಗೂ ರೂಪಾ, ಸರ್ಕಾರಿ ಪ.ಪೂ.ಕಾಲೇಜು ಕರ್ಜೆ,ಸಾಧಕ ಶಿಕ್ಷಕ ಪ್ರಶಸ್ತಿ-ಇಂಗ್ಲಿಷ್ ಮಾಧ್ಯಮ-ಪ್ರೌಢಶಾಲಾ ವಿಭಾಗ:  ದೇವೇಂದ್ರ ನಾಯಕ್, ಭಾರತಿ, ರಾಮಕೃಷ್ಣ ನಾಯಕ್, ಅಡ್ವೆ ರವೀಂದ್ರ ಪೂಜಾರಿ, ವೆಂಕಟ್ರಮಣ ಉಪಾಧ್ಯ, ಸಿಸ್ಟರ್ ರೂಸಿ ಮೆಂಡೋನ್ಸಾ, ಸೀಮಾ, ಶೋಭಾ ಪಿ, ಮೃದುಲಾ, ರೂಪಶ್ರೀ, ಪ್ಲೋರಿನ್ ಬಡಲ್‌ಕರ, ದೀಪಾ ಭಂಡಾರಿ, ಗಿರಿಜಾ ಶೆಡ್ತಿ, ಸವಿತಾ ದೇವಿ, ಆಲ್ವಿನ್ ಡಿ’ ದಾಂತಿ, ಮಾರಿಯೇಟ್ ಸಿಕ್ವೇರ, ಸಿಸ್ಟರ್ ಕನೂಕಾ, ಜೆ.ಆರ್.ದಯಾರಾವ್, ಉಷಾ ವಿ. ನಾಯಕ್, ಮಧುಕೇಶ್ವರ ಹೆಗ್ಗಡೆ, ಮನೋರಮಾ, ಬಿ.ಟಿ.ನಾಯ್ಕಿ, ದೇವೇಂದ್ರ ನಾಯಕ್, ಸುಧೀರ್ ಪ್ರಭು, ಸಿಸ್ಟರ್ ಸಿಲ್ವಿಯಾ, ಸುಜಾತಾ, ಆಶಾ ಟಿ, ಸಿಸಿಲಿಯಾ ಹೆಲನ್ ಡಿಸೋಜ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry