`ಸಾಧನೆಗೆ ಪರಿಶ್ರಮ ಅಗತ್ಯ'

7

`ಸಾಧನೆಗೆ ಪರಿಶ್ರಮ ಅಗತ್ಯ'

Published:
Updated:

ಆನೇಕಲ್: `ವಿದ್ಯಾರ್ಥಿಗಳು ಶಾಲಾ ದಿನಗಳಿಂದಲೇ ಜೀವನದಲ್ಲಿ ಮುಂದೇನಾಗಬೇಕೆಂಬ ಗುರಿ ಇರಬೇಕು' ಎಂದು ವಿಶ್ವಚೇತನ ವಿದ್ಯಾಸಂಸ್ಥೆಯ ಸಂಸ್ಥಾಪಕರು ಹಾಗೂ ಇನ್ಫೋಸಿಸ್‌ನ ಮಾಜಿ ನೌಕರ ಸಿ. ಶ್ರಿಕಾಂತ್ ಅಭಿಪ್ರಾಯಪಟ್ಟರು.ಪಟ್ಟಣದ ಗಜಶಿಲಾ ಗಂಗೋತ್ರಿ ಶಾಲೆಗೆ  ಇನ್ಫೋಸಿಸ್ ಸಂಸ್ಥೆಯಿಂದ ಉಚಿತವಾಗಿ ನೀಡಲಾಗಿದ್ದ ಗಣಕ ಯಂತ್ರಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.`ವಿದ್ಯಾರ್ಥಿಗಳು ಗುರಿಯ ಬಗ್ಗೆ ಸ್ಪಷ್ಟತೆಯನ್ನು ಹೊಂದಿ ಸಾಧನೆಗೆ ಸತತ ಪರಿಶ್ರಮ ಪಡಬೇಕು' ಎಂದು ಅವರು ತಿಳಿಸಿದರು.

`ಪ್ರಸ್ತುತ ದಿನಗಳಲ್ಲಿ ಎಲ್ಲಾ ರಂಗಗಳಲ್ಲೂ ಕಂಪ್ಯೂಟರ್ ಅವಶ್ಯಕತೆ ಇರುವುದರಿಂದ ಪ್ರಾಥಮಿಕ ಹಂತದಲ್ಲಿ ಗಣಕ ಯಂತ್ರಗಳ ಬಳಕೆಯ ಅನುಭವ ಬಂದರೆ ಉನ್ನತ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಅನುಕೂಲವಾಗುತ್ತದೆ' ಎಂದು ಹೇಳಿದರು.ಗಜಶಿಲಾ ಗಂಗೋತ್ರಿ ವಿದ್ಯಾಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಶಿವಶಂಕರಯ್ಯ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಲ್ಲೇ ಉತ್ತಮ ನಡತೆಯನ್ನು ಮೈಗೊಡಿಸಿಕೊಂಡು, ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳ ಬೇಕು ಹಾಗೇ ಗಣಕಯಂತ್ರ ಶಿಕ್ಷಣವನ್ನು ಜೊತೆಜೊತೆಯಲ್ಲಿ ಕಲಿತು ದೇಶದ ಉತ್ತಮ ಪ್ರಜೆಗಳಾಗ ಬೇಕು ಎಂದರು.ಇನ್ಫೋಸಿಸ್ ಸಂಸ್ಥೆಯವರು ನಮ್ಮ ಸಂಸ್ಥೆಯ ಮೇಲೆ ವಿಶ್ವಾಸಿವಿಟ್ಟು  ಗಣಕ ಯಂತ್ರಗಳನ್ನು ನೀಡಿದ್ದಾರೆ ಆ ಸಂಸ್ಥೆಯ ಆಡಳಿತ ಮಂಡಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.ಆನೇಕಲ್ ಟೌನ್ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ವೈ. ಮಂಜುನಾಥ್ ಮಾತನಾಡಿದರು. ರಾಘವೇಂದ್ರ ಎಲೆಕ್ಟ್ರಾನಿಕ್ಸ್‌ನ ಮಾಲೀಕ ಎಸ್. ನರಸಿಂಹ ಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಕೆ. ಚಂದ್ರಶೇಖರ್, ಬಿಜೆಪಿ ಮುಖಂಡೆ ನಾಗಲಕ್ಷ್ಮೀ ನರಸಿಂಹ ಮೂರ್ತಿ, ಪೋಷಕ ಪ್ರತಿನಿಧಿ ಕುಮಾರ್, ಮುಖ್ಯ ಶಿಕ್ಷಕಿ ಪದ್ಮಾ ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry