ಸಾಧನೆಗೆ ಪುಸ್ತಕಗಳ ಅಧ್ಯಯನ ಅಗತ್ಯ
ಜನವಾಡ: ಸಾಧನೆಗೆ ಪುಸ್ತಕಗಳ ಅಧ್ಯಯನ ಅಗತ್ಯ ಎಂದು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಪ್ರೇಮಸಾಗರ್ ದಾಂಡೇಕರ್ ಅಭಿಪ್ರಾಯಪಟ್ಟರು. ಬೀದರ್ ತಾಲ್ಲೂಕಿನ ರೇಕುಳಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಶಾಲಾಶ್ರದ್ಧಾ ವಾಚನಾಲಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಜುಕುಮಾರ್ ನಡುಕರ್ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ಶಾಲಾಭಿವದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಕ್ಕಪ್ಪ ನಾಗನಕೇರಾ, ಪ್ರಮುಖರಾದ ಪಾಂಡುರಂಗ ಗುರೂಜಿ ಮಾತನಾಡಿದರು. ಮುಖ್ಯಗುರು ಶಾಂತಪ್ಪ ಬಡಿಗೇರ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಇಸ್ಮಾಯಿಲ್, ರವಿ ಎ., ಮೆಹಬೂಬ್ ಅಲಿ, ರೂಬಿನಾ ಬೇಗಂ, ಅಂಜನಾ, ಬಕ್ಕಪ್ಪ, ಜಗನ್ನಾಥ ಉಪಸ್ಥಿತರಿದ್ದರು. ಸಂತೋಷ್ ನಿರೂಪಿಸಿದರು. ಲಕ್ಷ್ಮಿಕಾಂತ್ ಬುಯ್ಯೊ ವಂದಿಸಿದರು.
ಮರ್ಜಾಪುರ (ಎಂ) ಗ್ರಾಮ): ಶಾಲಾಶ್ರದ್ಧಾ ವಾಚನಾಲಯ ಉದ್ಘಾಟನಾ ಸಮಾರಂಭ ಬೀದರ್ ತಾಲ್ಲೂಕಿನ ಮರ್ಜಾಪುರ(ಎಂ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆಯಿತು. ಪ್ರಮುಖರಾದ ಶಿವರಾಜ ಮುಖ್ಯಗುರು ಜಗತ್ಪ್ರಕಾಶ್, ಪ್ರಮುಖರಾದ ರಾಜಪ್ಪ ಚಳಕೆ ಪುಸ್ತಕಗಳ ಮಹತ್ವ ಕುರಿತು ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಹಣಮಂತಪ್ಪ, ಪ್ರಮುಖರಾದ ಈರಣ್ಣ, ಹಬೀಬ್ಮಿಯ್ಯ, ಶರಣ್ಕುಮಾರ್ ಎನ್.ಸೂಗಮ್ಮ ಇದ್ದರು.
ಉರ್ದು ಮಾಧ್ಯಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮವನ್ನು ಶಾಲಾಭಿವದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಫಿಕ್ಮಿಯ್ಯ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಹಬೀಬ್ಮಿಯ್ಯ, ಪ್ರಮುಖರಾದ ಸರ್ದಾರ್ ಅಲಿ, ಈರಪ್ಪ, ಮುಖ್ಯಗುರು ಏಜಾಜ್ ಅಹಮ್ಮದ್ ಮತ್ತಿತರರು ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.