ಶುಕ್ರವಾರ, ಏಪ್ರಿಲ್ 16, 2021
31 °C

ಸಾಧನೆಗೆ ಬಡತನ ಅಡ್ಡಿಯಲ್ಲ: ರೋಸಾಕುಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜೀವನದಲ್ಲಿ ಸಾಧನೆ ಮಾಡಲು ನಿಶ್ಚಿತವಾದ ಗುರಿಯನ್ನಿಟ್ಟುಕೊಳ್ಳಬೇಕು. ಶ್ರದ್ಧೆ, ಛಲದಿಂದ ಸಾಧನೆ ಮಾಡಿದರೆ ಯಶಸ್ಸಿಗೆ ಬಡತನ ಅಡ್ಡಿಯಾಗಲಾರದು ಎಂದು ಅರ್ಜುನ್ ಮತ್ತು ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಕ್ರೀಡಾಪಟು ರೋಸಾ ಕುಟ್ಟಿ ಅಭಿಪ್ರಾಯಪಟ್ಟರು. ಗುಬ್ಬಿಯ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಸಿಐಟಿ) ಆರಂಭವಾದ ನಾಲ್ಕು ದಿನಗಳ “ಸಿಐಟಿ ಕಪ್-2011’ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.ತಮ್ಮ ಜೀವನದ ಘಟನೆಗಳನ್ನು ನೆನಪಿಸಿಕೊಂಡ ಅವರು, ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾಗ ಪಿ.ಟಿ.ಉಷಾ ಅವರ ಸುದ್ದಿ, ಫೋಟೋಗಳನ್ನು ಪತ್ರಿಕೆಗಳಲ್ಲಿ ನೋಡಿ ಉತ್ತೇಜಿತಳಾಗಿ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡೆ ಎಂದರು. ಜೀವನದಲ್ಲಿ ಎದುರಾದ ಯಾವ ಸಮಸ್ಯೆಗಳಿಂದಲೂ ವಿಚಲಿತರಾಗದೆ ಮುಂದುವರಿದ ಪರಿಣಾಮ ಖ್ಯಾತ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಜತೆಯಲ್ಲೇ ಪ್ರತಿಷ್ಠಿತ ಅರ್ಜುನ್ ಪ್ರಶಸ್ತಿ ಪಡೆದುಕೊಂಡೆ. ನಂತರ ಏಕಲವ್ಯ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡ ಕ್ಷಣಗಳನ್ನು ಹೆಮ್ಮೆಯಿಂದ ರೋಸಾಕುಟ್ಟಿ ಸ್ಮರಿಸಿದರು.ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಗಿರುತ್ತದೆ. ಆದರೆ ಬಡತನ, ಇತರ ಸಮಸ್ಯೆಗಳ ನೆಪಮೊಡ್ಡಿ ವಿಚಲಿತರಾಗದಿದ್ದರೆ ಯಾರು ಬೇಕಾದರೂ ಅದ್ಭುತಗಳನ್ನು ಸಾಧಿಸಬಹುದು ಎಂದು ಹೇಳಿದರು.

ಸಿಐಟಿ ಸಂಸ್ಥೆ ಕಾರ್ಯದರ್ಶಿ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಕ್ರೀಡಾ ತಂಡಗಳಿಗೆ ಶುಭ ಕೋರಿದರು. ಕಾಲೇಜು ನಿರ್ದೇಶಕ ಡಾ.ಡಿ.ಎಸ್.ಸುರೇಶ್‌ಕುಮಾರ್ ಮಾತನಾಡಿದರು. ಉಪ ಪ್ರಾಂಶುಪಾಲ ಪ್ರೊ.ಶಾಂತಲಾ ಸುರೇಶ್ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ವಿ.ವೆಂಕಟೇಶ್ ವಂದಿಸಿದರು. ಲಿಖಿತಾ ನಿರೂಪಿಸಿದರು.

ಪಂದ್ಯಾವಳಿಯಲ್ಲಿ ರಾಜ್ಯದ ಎಂಟು ಎಂಜಿನಿಯರಿಂಗ್ ಕಾಲೇಜು ತಂಡಗಳು ಪಾಲ್ಗೊಂಡಿವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.