ಸಾಧನೆಗೆ ಮಾಧ್ಯಮ ತೊಡಕಲ್ಲ

7

ಸಾಧನೆಗೆ ಮಾಧ್ಯಮ ತೊಡಕಲ್ಲ

Published:
Updated:

ಕನ್ನಡ ಮಾಧ್ಯಮದಲ್ಲಿಯೇ ಪ್ರಾಥಮಿಕ ಹಂತದಿಂದ ಪ್ರೌಢಶಾಲೆ ಹಂತದವರೆಗೆ ಕನ್ನಡ ಮಾಧ್ಯಮದಲ್ಲೇ ಓದಿ ನಂತರ ಆಂಗ್ಲ ಮಾಧ್ಯಮದಲ್ಲಿ ಉನ್ನತ ಸಾಧನೆ ಮಾಡಿದವರು ನಮ್ಮ ಕಾಲದವರೇ ಸಾಕಷ್ಟು ಮಂದಿ ಇದ್ದಾರೆ. ನನ್ನ ಪತಿ ಶ್ರೀರಾಮ್ ಕೂಡ ಪ್ರೌಢಶಾಲೆವರೆಗೂ ಕನ್ನಡ ಮಾಧ್ಯಮದಲ್ಲೇ ಓದಿ ಆನಂತರ ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಇಂಗ್ಲಿಷ್ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಕಲಿತವರ ಸಾಧನೆ ಗುರುತಿಸಿ, ಸಾಧನೆಗೆ ಮಾಧ್ಯಮ ತೊಡಕಲ್ಲ ಎನ್ನುವುದನ್ನು ತೋರಿಸಿಕೊಟ್ಟಿರುವ `ಪ್ರಜಾವಾಣಿ~ ಪ್ರಯತ್ನ ಮೆಚ್ಚುವಂತಹುದು.  ಒಂದೊಂದು ರಂಗದಲ್ಲೂ ಯಶಸ್ಸು ಪಡೆದಿರುವ ಯುವಕರು `ಮಾತೃ ಭಾಷೆಯಯಲ್ಲಿ ಶಿಕ್ಷಣ~ ಮಾಲಿಕೆಯಲ್ಲಿ ಹಂಚಿಕೊಂಡಿರುವ ಅನಿಸಿಕೆಗಳು ಅತ್ಯಂತ ಆಪ್ತವಾಗಿವೆ.                                   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry