ಸಾಧನೆಗೆ ಸವಾಲುಗಳೇ ಮೆಟ್ಟಿಲು..

7

ಸಾಧನೆಗೆ ಸವಾಲುಗಳೇ ಮೆಟ್ಟಿಲು..

Published:
Updated:
ಸಾಧನೆಗೆ ಸವಾಲುಗಳೇ ಮೆಟ್ಟಿಲು..

ಛಲ, ಆತ್ಮವಿಶ್ವಾಸ ಮೈಗೂಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಖಂಡಿತ. ಇವೆರಡನ್ನೂ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡಿದವರ ಸಾಲಿಗೆ ಸೇರುತ್ತಾರೆ ಅಂಕೋಲಾ ಕಾಕರಮಠ ಸಮೀಪದ ನಿವಾಸಿ ಡಾ. ಪ್ರಕಾಶ ಕಾಮತ್.ನಿವೃತ್ತ ಮುಖ್ಯಾಧ್ಯಾಪಕ, ಸಾಹಿತಿ ಎನ್.ಬಿ.ಕಾಮತ್ ದಂಪತಿ ಪುತ್ರ ಡಾ. ಕಾಮತ್ ಅವರು ಜೀವನದಲ್ಲಿ ಎದುರಾದ ಸವಾಲುಗಳನ್ನೇ ಯಶಸ್ಸಿನ ಮೆಟ್ಟಿಲಾಗಿ ಸ್ವೀಕರಿಸಿದರು.ಈ ಸವಾಲು ಎದುರಿಸುವ ಶಕ್ತಿಯೇ ಅವರನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಚೆನ್ನೈನಲ್ಲಿರುವ ಎಂಜಿನ್ ಡೆವಲಪ್‌ಮೆಂಟ್ ಸೆಂಟರ್‌ನ ಮುಖ್ಯಸ್ಥರ ಹುದ್ದೆಗೇರುವಂತೆ ಮಾಡಿದೆ.

ಪ್ರಾಥಮಿಕ ಮತ್ತು ಪ್ರೌಢ ಮತ್ತು ಕಾಲೇಜು ಶಿಕ್ಷಣವನ್ನು ಅಂಕೋಲಾ ಮತ್ತು ಹೊನ್ನಾವರದಲ್ಲಿ ಮುಗಿಸಿದ ಡಾ. ಪ್ರಕಾಶ ಅವರು ಭಟ್ಕಳದ ಅಂಜುಮನ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ವಿಭಾಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮೂರನೇ ರ‌್ಯಾಂಕ್‌ಗಳಿಸಿದರು.ಆಗಷ್ಟೇ ಪ್ರಾರಂಭವಾದ ಕಾಲೇಜಿನಲ್ಲಿ ಸರಿಯಾಗಿ ಮೂಲಸೌಕರ್ಯಗಳಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೇಗೇ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸುವುದು ಎಂದು ಎಲ್ಲ ವಿದ್ಯಾರ್ಥಿಗಳು ಚಿಂತೆಗೊಳಗಾಗಿದ್ದರೂ. ಪ್ರಾಯೋಗಿಕ ತರಬೇತಿಗೆ ವಿದ್ಯಾರ್ಥಿಗಳನ್ನು ಮಂಗಳೂರು, ಸುರತ್ಕಲ್ ಮತ್ತು ಉಡುಪಿಯಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳಿಗೆ ಹೋಗಬೇಕಾಗಿತ್ತು.ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಎಂಜಿನಿಯರಿಂಗ್ ಪದವಿಯಲ್ಲಿ ರ‌್ಯಾಂಕ್‌ಗಳಿಸಿದ ಕಾಮತ್ ಅವರಿಗೆ ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು.ಕೆಲಕಾಲ ಮುಂಬೈನ ಕಂಪೆನಿಯೊಂದರಲ್ಲಿ ಸೇವೆ ಸಲ್ಲಿಸಿ ತವರಿಗೆ ಹಿಂತಿರುಗಿದ ಅವರು ಅವರು, ಮೈಸೂರಿನಲ್ಲಿ ಎಂಇ ಶಿಕ್ಷಣ ಪಡೆದು ನಂತರ ಮದ್ರಾಸ್ ಐಐಟಿಯಲ್ಲಿ ಪಿಎಚ್‌ಡಿ ಅಧ್ಯಯನ ಪ್ರಾರಂಭಿಸಿದರು.ಪಿಎಚ್‌ಡಿ ಅಧ್ಯಯನ ಮಾಡುತ್ತಿರುವಾಗಲೇ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಆಯ್ಕೆಯಾದರು.ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿಗೆ ಆಯ್ಕೆಯಾದ ನಂತರ 2005ರಲ್ಲಿ ಪುಣೆಯಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ಕಾಮತ್ ಅವರು ಕಂಪೆನಿಯನ್ನು ಪ್ರತಿನಿಧಿಸಿ ಮಂಡಿಸಿದ ಪ್ರಬಂಧ ಪ್ರಥಮ ಸ್ಥಾನ ಪಡೆಯಿತು. ಒಟ್ಟು 14 ದೇಶಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಡಾ. ಪ್ರಕಾಶ ಮಾಡಿದ ಸಾಧನೆಯಿಂದ ಕಂಪೆನಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಗೌರವ ತಂದುಕೊಟ್ಟಿತು.

ಹೀಗೆ ಡಾ. ಕಾಮತ್ ಅವರು ಚಿಕಾಗೊ, ಮುಂಬೈನಲ್ಲಿ ನಡೆದ ಪ್ರಬಂಧ ಮಂಡನೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದು ಕಂಪೆನಿಗೆ ಕೀರ್ತಿ ತಂದರು.`ಟ್ರ್ಯಾಕ್ಟರ್ ಇವಾಲ್ಯುಯೇಶನ್ ಥ್ರೂ ತ್ರೀ ಪೊಸ್ಟರ್ ಟೆಸ್ಟ್ ಸಿಸ್ಟಮ್~, ` ಬ್ರಿಗಿಂಗ್ ಫಿಲ್ಡ್ ಟು ಲ್ಯಾಬ್ ಇನ್ ಟ್ರ್ಯಾಕ್ಟರ್ ಇವಾಲ್ಯುಯೇಶನ್ ಥ್ರೂ ತ್ರಿ ಪೊಸ್ಟರ್ ಸಿಸ್ಟಮ್ ಅಂಡ್ ಸ್ಟ್ಯಾಸ್ಟಿಕಲ್ ಟೂಲ್ಸ್~, `ಡೆವಲಪ್‌ಮೆಂಟ್ ಆಫ್ ಟೆಸ್ಟ್ ಫೆಸಿಲಿಟಿ ಫಾರ ಆ್ಯಕ್ಸಿಲರೆಟೆಡ್ ಇವಾಲ್ಯುಯೇಶನ್~, ` ಡಿಸೈನ್ ಅಂಡ್ ಡೆವಲಪ್‌ಮೆಂಟ್ ಆಫ್ ಆರ್‌ಸಿಎಫ್ ಟೆಸ್ಟ್ ರಿಂಗ್~ ಸೇರಿದಂತೆ ವಿವಿಧ ವಿಷಯಗಳಲ್ಲಿ ಪ್ರಬಂಧ ಮಂಡಿಸಿ ಐದಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದಾರೆ.`ವಿದ್ಯಾರ್ಥಿ ಜೀವನದಲ್ಲಿ ಎದುರಿಸಿದ ಸವಾಲುಗಳು ಸಾಧನೆಗೆ ಮೆಟ್ಟಿಲುಗಳಾಯಿತು. ಪ್ರತಿಯೊಬ್ಬ ಉದ್ಯೋಗಿಯಲ್ಲೂ ಸ್ವಾಭಿಮಾನದ ಕೆಚ್ಚು ಬೆಳೆಸುವ ಕಂಪೆನಿಯ ಧ್ಯೇಯವೂ ಅನೇಕ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಲು ಅನುಕೂಲವಾಯಿತು~ ಎನ್ನುತ್ತಾರೆ ಡಾ. ಪ್ರಕಾಶ ಕಾಮತ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry