ಮಂಗಳವಾರ, ಮೇ 24, 2022
22 °C

ಸಾಧನೆಯ ಹಾದಿಗೆ ಸಂಗಾತಿಗಳೇ ಅಡ್ಡಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಐಎಎನ್‌ಎಸ್): ನಿಮ್ಮನ್ನು ಪ್ರೀತಿಸುವ ಮತ್ತು ಸದಾ ನಿಮಗಾಗಿ ಹಂಬಲಿಸುವ ನಿಮ್ಮ ಸಂಗಾತಿ ಯಾವಾಗಲೂ ನಿಮ್ಮೆಲ್ಲ ಕೆಲಸ ಕಾರ್ಯ ಅಥವಾ ಸಾಧನೆಗಳಿಗೆ ಸಹಕಾರಿಯಾಗಿಯೇ ಇರುತ್ತಾರೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು.ಹೊಸ ಅಧ್ಯಯನವೊಂದರ ಪ್ರಕಾರ ಪ್ರೀತಿಪಾತ್ರ ಸಂಗಾತಿಗಳು, ಸಾಧನೆ ಮತ್ತು ಅಧ್ಯಯನಗಳಲ್ಲಿ ತೊಡಗಿದಾಗ ಪರಸ್ಪರ ಹೆಚ್ಚಿನ ಸಹಕಾರ ನೀಡುವ ಸಾಧ್ಯತೆ ಇರುವುದಿಲ್ಲ ಎಂಬ ಅಂಶವನ್ನು ಪತ್ತೆಹಚ್ಚಲಾಗಿದೆ.ಡ್ಯೂಕ್ ವಿಶ್ವವಿದ್ಯಾಲಯದ ಮನಃಶಾಸ್ತ್ರ ವಿಭಾಗದ ವಿಜ್ಞಾನಿ ಗ್ರ್ಯಾನಿ ಎಂ. ಫಿಟ್ಜ್‌ಸಿಮನ್ಸ್ ಹಾಗೂ ನಾರ್ಥ್‌ವೆಸ್ಟರ್ನ್ ವಿಶ್ವವಿದ್ಯಾಲಯದ ಎಲಿ ಜೆ. ಫಿಂಕೆಲ್ ನಡೆಸಿರುವ ಅಧ್ಯಯನದಲ್ಲಿ ಈ ಅಂಶವನ್ನು ಪತ್ತೆಹಚ್ಚಲಾಗಿದೆ.ಸ್ವಂತ ಪರಿಶ್ರಮದ ಮೂಲಕ ಯಾವುದಾದರೂ ಗುರಿ ಮುಟ್ಟುವ ಸಾಧನೆಗಳಲ್ಲಿ ತೊಡಗಿದ್ದಾಗ ಸಂಗಾತಿಗಳ ಸುಪ್ತ ಮನಸ್ಸು ಅದಕ್ಕೆ ಸಹಕಾರ ನೀಡಲು ಬಯಸುವುದಿಲ್ಲ ಎಂಬ ಅಂಶವು ಈ ಅಧ್ಯಯನದಲ್ಲಿ ಕಂಡು ಬಂದಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.ಮೂರು ವಿಧದ ಆನ್‌ಲೈನ್ ಪ್ರಯೋಗಗಳ ಮೂಲಕ ಈ ಅಧ್ಯಯನ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.