ಸಾಧನ ಸಂಗಮಕ್ಕೆ ರಜತ ಸಂಭ್ರಮ

ಸೋಮವಾರ, ಮೇ 20, 2019
30 °C

ಸಾಧನ ಸಂಗಮಕ್ಕೆ ರಜತ ಸಂಭ್ರಮ

Published:
Updated:

ಸಾಧನ ಸಂಗಮ ಟ್ರಸ್ಟ್: ಶನಿವಾರ ರಜತ ಸಂಭ್ರಮ. 60 ಕಲಾವಿದರಿಂದ `ವಿಶ್ವಾಮಿತ್ರ ಗಾಯತ್ರಿ~, `ಸೂರ್ಯಾಂಜಲಿ ನೃತ್ಯ~, `ಕಸ್ತೂರಿ ಮೃಗ~ ಎಂಬ ಮೂರು ನೃತ್ಯ ರೂಪಕಗಳ ಪ್ರದರ್ಶನ.ಉದ್ಘಾಟನೆ: ಡಾ.ಆರ್. ಸತ್ಯನಾರಾಯಣ. ಅತಿಥಿಗಳು: ಪ್ರೊ.ಚೂಡಾಮಣಿ ನಂದಗೋಪಾಲ್, ಆರ್.ಶಾರದಮ್ಮ.25 ವರ್ಷಗಳಿಂದ ನಿರಂತರವಾಗಿ ಯೋಗ, ನೃತ್ಯ, ಆತ್ಮವಿದ್ಯೆ ಹಾಗೂ ಸಂಗೀತ ಹೀಗೆ ಸಮಗ್ರ ಶಿಕ್ಷಣದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬರುತ್ತಿರುವ ಸಾಧನ ಸಂಗಮ ಟ್ರಸ್ಟ್‌ಗೆ ಈಗ 25ರ ಸಡಗರ.1986ರಲ್ಲಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಗೆ ಪಟ್ಟಾಭಿರಾಮ್ ಮತ್ತು ವಿದುಷಿ ಜ್ಯೋತಿ ಪಟ್ಟಾಭಿರಾಮ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚೆನ್ನಪಟ್ಟಣದ ಕಣ್ವ ಜಲಾಶಯದ ಬಳಿ ಸಾಧನಧಾಮ ಆಶ್ರಮ ಸ್ಥಾಪಿಸಿ ಅಲ್ಲಿ ಯೋಗ, ನೃತ್ಯ ಶಿಕ್ಷಣವಲ್ಲದೇ ಸುತ್ತ ಮುತ್ತಲಿನ ಗ್ರಾಮಗಳ ಮಕ್ಕಳಿಗೆ ಉಚಿತ ಗುರುಕುಲ ಮಾದರಿ ಶಿಕ್ಷಣ ನೀಡುತ್ತಿದೆ. ವಿದೇಶಗಳಲ್ಲೂ ಯೋಗ, ಭಾರತೀಯ ನೃತ್ಯ ಪರಂಪರೆಗಳ ಬಗ್ಗೆ ಪ್ರಸಾರ ಕಾರ್ಯ ನಡೆಸುತ್ತಿದೆ. ಸ್ಥಳ: ಡಾ. ರಾಜ್ ಕುಮಾರ್ ಸಭಾಂಗಣ, ಆರ್‌ಟಿಓ ಕಚೇರಿ, ರಾಜಾಜಿನಗರ.ಸಂಜೆ 5. ಮಾಹಿತಿಗೆ: 2322 2611. 

 

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry