ಸಾನಿಯಾಗೆ ಮಿಶ್ರಫಲ

7

ಸಾನಿಯಾಗೆ ಮಿಶ್ರಫಲ

Published:
Updated:

ಪಟ್ಟಾಯಾ (ಪಿಟಿಐ): ಭಾರತದ ಸಾನಿಯಾ ಮಿರ್ಜಾ ಇಲ್ಲಿ ನಡೆಯುತ್ತಿರುವ ಪಟ್ಟಾಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಕ್ರವಾರ ಮಿಶ್ರಫಲ ಅನುಭವಿಸಿದರು. ಸಿಂಗಲ್ಸ್‌ನಲ್ಲಿ ಸೋಲು ಕಂಡರೆ, ಡಬಲ್ಸ್ ವಿಭಾಗದಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದರು.ಹೈದರಾಬಾದ್‌ನ ಆಟಗಾರ್ತಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 5-7, 3-6ರಲ್ಲಿ ಚೈನೀಸ್ ತೈಪೆಯದ ಸೊ ವೇಯಿ ಹೈಸಿ ಎದುರು ನಿರಾಸೆ ಅನುಭವಿಸಿದರು. ಈ ಮೂಲಕ ಸಿಂಗಲ್ಸ್‌ನಲ್ಲಿ ಹೋರಾಟ ಅಂತ್ಯಗೊಳಿಸಿದರು.

ಆಸ್ಟ್ರೇಲಿಯಾದ ಅನಸ್ತೇಸಿಯಾ ರೊಡೆನೊವಾ ಜೊತೆಗೂಡಿ ಆಡಿದ ಭಾರತದ ಆಟಗಾರ್ತಿ ಎಂಟರಘಟ್ಟದ ಪಂದ್ಯದಲ್ಲಿ 6-4, 6-3ರ ನೇರ ಸೆಟ್‌ಗಳಿಂದ ಸ್ಥಳೀಯ ಜೋಡಿ ವರಚಾಯ-ವಾರುಣ್ಯ ವಾಂಗ್ಟಿನ್‌ಚಾಯಿ ಜೋಡಿಯನ್ನು ಮಣಿಸಿತು. ಇಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ `ಭಾರತ-ಆಸ್ಟ್ರೇಲಿಯಾ~ ಜೋಡಿ ಎರಡೂ ಸೆಟ್‌ಗಳಲ್ಲಿ ಅಲ್ಪ ಪ್ರತಿರೋಧ ಎದುರಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry