ಸಾನಿಯಾ ಜೋಡಿಗೆ ಸೋಲು

7

ಸಾನಿಯಾ ಜೋಡಿಗೆ ಸೋಲು

Published:
Updated:

ಮ್ಯಾಡ್ರಿಡ್ (ಪಿಟಿಐ): ಭಾರತ ಸಾನಿಯಾ ಮಿರ್ಜಾ ಹಾಗೂ ಅವರ ಜೊತೆಗಾರ್ತಿ ಆಸ್ಟ್ರೇಲಿಯಾದ ಅನಾಸ್ತೇಸಿಯಾ ರಾಡಿಯೊನೊವಾ ಇಲ್ಲಿ ನಡೆಯುತ್ತಿರುವ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಸೋಲು ಕಂಡಿದ್ದಾರೆ.ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ-ಅನಾಸ್ತೇಸಿಯಾ 3-6, 2-6ರಲ್ಲಿ ಜರ್ಮನಿಯ ಅನಾ-ಲೆನಾ ಗ್ರೊಯೆನ್‌ಫೆಲ್ಡ್ ಹಾಗೂ ಚೀನಾದ ಶುಯಿ ಜಾಂಗ್ ಎದುರು ಆಘಾತ ಅನುಭವಿಸಿದರು.ಆರನೇ ಶ್ರೇಯಾಂಕ ಪಡೆದಿದ್ದ ಭಾರತ-ಆಸ್ಟ್ರೇಲಿಯಾದ ಜೋಡಿ ಎರಡೂ ಸೆಟ್‌ಗಳಲ್ಲಿ ನೀರಸ ಪ್ರದರ್ಶನ ತೋರಿತು. ಆರಂಭದಿಂದಲೇ ಎದುರಾಳಿ ಮೇಲೆ ಒತ್ತಡ ಹೇರಿದ ಗ್ರೊಯೆನ್‌ಫೆಲ್ಡ್ ಹಾಗೂ ಜಾಂಗ್ ಸುಲಭವಾಗಿ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry