ಸಾನಿಯಾ ಜೋಡಿಗೆ ಸೋಲು

7
ಡಬ್ಲ್ಯುಟಿಎ ಅಪಿಯಾ ಟೆನಿಸ್ ಟೂರ್ನಿ

ಸಾನಿಯಾ ಜೋಡಿಗೆ ಸೋಲು

Published:
Updated:

ಸಿಡ್ನಿ (ಪಿಟಿಐ): ಭಾರತದ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಲಾಕ್ ಜೋಡಿ ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಅಪಿಯಾ ಅಂತರರಾಷ್ಟ್ರೀ ಯ ಟೂರ್ನಿಯ ಮೊದಲ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ.ಮೂರನೇ ಶ್ರೇಯಾಂಕಿತ ಭಾರತ–ಜಿಂಬಾಬ್ವೆ ಜೋಡಿ 3–6, 2–6ರ ನೇರ ಸೆಟ್‌ಗಳಿಂದ ಆಸ್ಟ್ರೇಲಿಯಾದ ಜರ್ಮಿಲಾ ಗಾಜ್ಡೊಸೋವಾ ಮತ್ತು ಕ್ರೊವೇಷಿಯಾದ ಅಜ್ಲಾತ್ ಟಾಮ್ಲ್‌ ಜಾನೊವಿಕ್ ಜೋಡಿಗೆ ಸುಲಭವಾಗಿ ಶರಣಾಯಿತು. 2013ರ  ಋತುವಿನಲ್ಲಿ ಜಪಾನ್ ಹಾಗೂ ಚೀನಾದಲ್ಲಿ ಒಂದರ ಹಿಂದೆ ಒಂದು ಪ್ರಶಸ್ತಿ ಜಯಿಸಿ ಸಾನಿಯಾ, ಕಾರಾ ಜೋಡಿ  ಮಿಂಚಿತ್ತು.ಶುಭಾರಂಭ: ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಮಹಿಳಾ ವಿಭಾಗದ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ 7–6, 7–5ರಲ್ಲಿ ಡೊಮಿ ನಿಕಾ ಸಿಬುಕೊವಾ ಎದುರು ಜಯ ಪಡೆದು ಶುಭಾರಂಭ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry