ಗುರುವಾರ , ಏಪ್ರಿಲ್ 15, 2021
26 °C

ಸಾನಿಯಾ ಪ್ರತಿಭಾನ್ವಿತ ಆಟಗಾರ್ತಿ: ಶರಪೋವಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾನಿಯಾ ಪ್ರತಿಭಾನ್ವಿತ ಆಟಗಾರ್ತಿ: ಶರಪೋವಾ

ನವದೆಹಲಿ (ಪಿಟಿಐ/ ಐಎಎನ್‌ಎಸ್): ರಷ್ಯಾದ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ಭಾನುವಾರ ನವದೆಹಲಿಗೆ ಆಗಮಿಸಿ ಅಭಿಮಾನಿಗಳ ಮನಗೆದ್ದರು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ `ಟೆನಿಸ್ ಸುಂದರಿ~ ಭಾರತದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು.`ನನ್ನ ಮೊದಲ ಭಾರತ ಭೇಟಿ ಅದ್ಭುತ ಅನುಭವ ನೀಡಿದೆ. ಇಲ್ಲಿ ನನಗೆ ಅಪಾರ ಅಭಿಮಾನಿಗಳಿರುವುದು ಸಂತಸದ ವಿಚಾರ~ ಎಂದು ಅವರು ನುಡಿದರು. ಬ್ರಿಟನ್ ಮೂಲದ ರಿಯಲ್ ಎಸ್ಟೇಟ್ ಕಂಪೆನಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.ಸಾನಿಯಾ ಮಿರ್ಜಾ ಸಿಂಗಲ್ಸ್‌ನಿಂದ ದೂರ ಸರಿದು ಡಬಲ್ಸ್ ಪಂದ್ಯಗಳಲ್ಲಿ ಮಾತ್ರ ಆಡಲು ನಿರ್ಧರಿಸಿರುವುದರ ಬಗ್ಗೆ ಪ್ರಶ್ನೆ ಎದುರಾದಾಗ ಶರಪೋವಾ, `ಸಾನಿಯಾ ಸಿಂಗಲ್ಸ್‌ನಲ್ಲಿ ಪ್ರತಿಭಾನ್ವಿತ ಆಟಗಾರ್ತಿ. ಆದರೆ ಎರಡೂ ವಿಭಾಗಗಳಲ್ಲಿ (ಸಿಂಗಲ್ಸ್ ಮತ್ತು ಡಬಲ್ಸ್) ಆಡುವುದು ಅಷ್ಟು ಸುಲಭವಲ್ಲ. ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ಸವಾಲು ಎದುರಾಗುತ್ತದೆ. ಇದರಿಂದ ಡಬಲ್ಸ್‌ನಲ್ಲಿ ಮಾತ್ರ ಆಡಲು ನಿರ್ಧರಿಸಿರುವ ಸಾಧ್ಯತೆಯಿದೆ~ ಎಂದರು.ಸೆರೆನಾ ವಿಲಿಯಮ್ಸ ಹಾಗೂ ತಮ್ಮ ನಡುವಿನ `ಪೈಪೋಟಿ~ಯ ಬಗ್ಗೆ ಮಾತನಾಡಿದ ಶರಪೋವಾ, `ಕ್ರೀಡೆಯಲ್ಲಿ ಈ ರೀತಿಯ ಸ್ಪರ್ಧೆ ಇರುವುದು ಒಳ್ಳೆಯದು. ಇದರಿಂದ ಪ್ರದರ್ಶನಮಟ್ಟದಲ್ಲಿ ಸುಧಾರಣೆ ಕಂಡುಕೊಳ್ಳಲು ಸಾಧ್ಯ~ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.