ಸಾನಿಯಾ-ಬೆಥನಿ ಜೋಡಿಗೆ ಪ್ರಶಸ್ತಿ

7

ಸಾನಿಯಾ-ಬೆಥನಿ ಜೋಡಿಗೆ ಪ್ರಶಸ್ತಿ

Published:
Updated:
ಸಾನಿಯಾ-ಬೆಥನಿ ಜೋಡಿಗೆ ಪ್ರಶಸ್ತಿ

ಬ್ರಿಸ್ಬೇನ್ (ಪಿಟಿಐ): ಸಾನಿಯಾ ಮಿರ್ಜಾ ಅವರು ಇಲ್ಲಿ ನಡೆದ ಡಬ್ಲ್ಯುಟಿಎ ಬ್ರಿಸ್ಬೇನ್ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಯ ಡಬಲ್ಸ್‌ನಲ್ಲಿ ಅಮೆರಿಕಾದ ಬೆಥನಿ ಮಾಟೆಕ್ ಸ್ಯಾಂಡ್ಸ್ ಜತೆಗೂಡಿ ಆಡಿ ಪ್ರಶಸ್ತಿಯನ್ನು ಗೆದ್ದುಕೊಂಡರು.ಶನಿವಾರ ನಡೆದ ಈ ತೀವ್ರ ಸೆಣಸಾಟದ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಈ ಜೋಡಿ 4-6, 6-4, 10-07ಯಿಂದ ಕ್ವೇಟಾ ಪೆಶ್ಕೆ ಮತ್ತು ಆನಾ ಲೆನಾ ಅವರ ವಿರುದ್ಧ ಗೆಲುವು ಸಾಧಿಸಿತು.

ನಾಲ್ಕನೇ ಶ್ರೇಯಾಂಕದ ಕ್ವೇಟಾ ಜೋಡಿ ಮೊದಲ ಸೆಟ್‌ನಲ್ಲಿ ಗೆದ್ದಿತಾದರೂ, ನಂತರದ ಎರಡು ಸೆಟ್‌ಗಳಲ್ಲಿ ಸಾನಿಯ-ಬೆಥನಿ ಜೋಡಿಯೇ ಮೇಲುಗೈ ಸಾಧಿಸಿತು.ಈ ಗೆಲುವಿನೊಂದಿಗೆ ಸಾನಿಯ ಮತ್ತು ಮಾಟೆಕ್ ಜೋಡಿಗೆ 470 ಪಾಯಿಂಟ್ಸ್‌ಗಳು ಸಿಕ್ಕಿದವಲ್ಲದೆ, ಇವರಿಬ್ಬರು 28 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಹಂಚಿಕೊಂಡರು.

ಈ ಋತುವಿನಲ್ಲಿ ಸಾನಿಯಾ ಮಿರ್ಜಾ  ಅವರು ಜಯಿಸಿದ ಮೊದಲ  ಪ್ರಶಸ್ತಿ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry