ಸಾನಿಯಾ ಮಿರ್ಜಾ ಹೋರಾಟ ಅಂತ್ಯ

7

ಸಾನಿಯಾ ಮಿರ್ಜಾ ಹೋರಾಟ ಅಂತ್ಯ

Published:
Updated:

ಮೆಲ್ಬರ್ನ್ (ಪಿಟಿಐ): ಭಾರತದ ಸಾನಿಯಾ ಮಿರ್ಜಾ ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಸಾನಿಯಾ ಅವರ ಸವಾಲಿಗೆ ತೆರೆಬಿತ್ತು.ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ ಮತ್ತು ಜೆಕ್ ಗಣರಾಜ್ಯದ ರೆನಾಟ ವೊರಸೋವಾ ಜೋಡಿ 4-6, 1-6 ರಲ್ಲಿ ಅರ್ಜೆಂಟೀನಾದ ಗಿಸೆಲಾ ಡುಲ್ಕೊ ಮತ್ತು ಇಟಲಿಯ ಫ್ಲೇವಿಯಾ ಪೆನೆಟಾ ಕೈಯಲ್ಲಿ ಪರಾಭವಗೊಂಡಿತು.ಮೊದಲ ಸೆಟ್‌ನಲ್ಲಿ ಸಾನಿಯಾ ಹಾಗೂ ರೆನಾಟಾ ಅವರು ಅಗ್ರಶ್ರೇಯಾಂಕದ ಜೋಡಿಗೆ ತಕ್ಕ ಪೈಪೋಟಿ ನೀಡಿದರಾದರೂ, ಎರಡನೇ ಸೆಟ್‌ನಲ್ಲಿ ಸುಲಭವಾಗಿ ಸೋಲು ಒಪ್ಪಿಕೊಂಡರು. ಈ ಪಂದ್ಯವು ಒಂದು ಗಂಟೆವರೆಗೆ ನಡೆಯಿತು.ಸಾನಿಯಾ ಅವರು ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲೂ ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿದ್ದರು. ಸೋಮವಾರ ನಡೆದ ಪಂದ್ಯದಲ್ಲಿ ಅವರು ಬೆಲ್ಜಿಯಂನ ಜಸ್ಟಿನ್ ಹೆನಿನ್ ಎದುರು ಪರಾಭವಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry