ಸಾನಿಯಾ- ವೆಸ್ನಿನಾಗೆ ನಿರಾಸೆ

7

ಸಾನಿಯಾ- ವೆಸ್ನಿನಾಗೆ ನಿರಾಸೆ

Published:
Updated:

ದುಬೈ (ಪಿಟಿಐ): ಸಾನಿಯಾ ಮಿರ್ಜಾ ಮತ್ತು ಎಲೆನಾ ವೆಸ್ನಿನಾ ಜೋಡಿ ಇಲ್ಲಿ ನಡೆದ ದುಬೈ ಟೆನಿಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ `ರನ್ನರ್ಸ್ ಅಪ್~ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಅಮೆರಿಕದ ಲಿಜೆಲ್ ಹುಬೆರ್ ಹಾಗೂ ಲೀಸಾ ರೇಮಂಡ್ 6-2, 6-1 ರಲ್ಲಿ ಭಾರತ- ರಷ್ಯಾ ಜೋಡಿಯನ್ನು ಮಣಿಸಿ ಚಾಂಪಿಯನ್ ಆದರು. 68 ನಿಮಿಷಗಳ ಹೋರಾಟದಲ್ಲಿ ಅಮೆರಿಕದ ಜೋಡಿ ಜಯ ಸಾಧಿಸಿತು.ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ಸಾನಿಯಾ- ವೆಸ್ನಿನಾ 6-2, 6-7, 13-11 ರಲ್ಲಿ ಚೀನಾದ ಶುಯ್ ಪೆಂಗ್ ಮತ್ತು ಚೈನೀಸ್ ತೈಪೆಯ ಸು ವೀ ಸೀ ವಿರುದ್ಧ ಪ್ರಯಾಸದ ಗೆಲುವು ಪಡೆದಿದ್ದರು.ಕೆಲ ವಾರಗಳ ಹಿಂದೆ ನಡೆದ ಪಟ್ಟಾಯಾ ಓಪನ್ ಟೂರ್ನಿಯಲ್ಲಿ ಸಾನಿಯಾ ಅವರು ಆಸ್ಟ್ರೇಲಿಯಾದ ಅನಸ್ತೇಸಿಯಾ ರೊಡಿಯನೋವಾ ಜೊತೆ ಸೇರಿಕೊಂಡು ಪ್ರಶಸ್ತಿ ಜಯಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry