ಸೋಮವಾರ, ಜೂನ್ 21, 2021
27 °C

ಸಾಫ್ಟ್‌ವೇರ್ ದುರ್ಬಳಕೆ ಆರೋಪ: ದಿಢೀರ್ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಟ್ವಾಳ: ತಾಲ್ಲೂಕಿನ ವಿವಿಧೆಡೆ ಕಂಪ್ಯೂಟರ್ ಬಳಕೆಯಲ್ಲಿ ವಿವಿಧ ಕಂಪೆನಿಗಳಿಗೆ ಸೇರಿದ ~ಸಾಫ್ಟ್‌ವೇರ್~ ದುರ್ಬಳಕೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಸ್ತಿಹಕ್ಕು ಸಂರಕ್ಷಣಾ ತಂಡವು (ಕಾಪಿರೈಟ್ ಪ್ರೊಟೆಕ್ಷನ್) ದಿಢೀರ್ ಕಾರ್ಯಾಚರಣೆ ನಡೆಸಿದ ಪ್ರಸಂಗ ಬುಧವಾರ ಬೆಳಕಿಗೆ ಬಂದಿದೆ.

ಆರಂಭದಲ್ಲಿ ವಿಟ್ಲ ಪ್ರದೇಶದ ಮುದ್ರಣ ಸಂಸ್ಥೆಯೊಂದರಲ್ಲಿ ಕಾರ್ಯಾಚರಣೆ ನಡೆಸಿದ್ದ ತಂಡದ ನಾಯಕ ಜಗದೀಶ್ ಮತ್ತು ಇತರ ಅಧಿಕಾರಿಗಳು, ಮೆಲ್ಕಾರ್‌ನಲ್ಲಿ ಬುಧವಾರ ಮಧ್ಯಾಹ್ನ ನಗರ ಪೊಲೀಸರೊಂದಿಗೆ ಧಾವಿಸಿ ಪರಿಶೀಲನೆ ನಡೆಸಿದರು.

ರಾಜ್ಯದ ಕನ್ನಡ ಭಾಷೆಗೆ ಸಂಬಂಧಿಸಿದಂತೆ ~ನುಡಿ~ ತಂತ್ರಾಂಶ ಹೊರತುಪಡಿಸಿ, ಫೊಟೋಶಾಪ್, ಕಾರೆಲ್‌ಡ್ರಾ, ಪೇಜ್‌ಮೇಕರ್, ಪ್ರಕಾಶಕ, ಶ್ರೀಲಿಪಿ ಮತ್ತಿತರ ತಂತ್ರಾಂಶವನ್ನು ಪರವಾನಿಗೆ ಇಲ್ಲದೆ ಡೌನ್‌ಲೋಡ್ ಮಾಡುವಂತಿಲ್ಲ ಎಂಬ ಎಚ್ಚರಿಕೆ ನೀಡಿರುವುದು ತಿಳಿದು ಬಂದಿದೆ. ಈ ನಡುವೆ ವಿಷಯ ತಿಳಿಯುತ್ತಿದ್ದಂತೆಯೇ ತಾಲ್ಲೂಕಿನ ಬಹುತೇಕ ಸ್ಟುಡಿಯೋ ಮಾಲೀಕರು ತಮ್ಮ ಸ್ಟುಡಿಯೊಗಳನ್ನು ಮುಚ್ಚಿದ್ದಾರೆ.

ವಿವಿಧ ಪತ್ರಿಕೆ ಅಥವಾ ದೃಶ್ಯಮಾಧ್ಯಮಗಳ ಮೂಲಕ ಈ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುವುದರ ಬದಲಿಗೆ ದಿಢೀರ್ ದಾಳಿ ನಡೆಸುತ್ತಿರುವ ತಂಡವು ಬಳಿಕ ರೂ 1ಲಕ್ಷಕ್ಕೂ ಮಿಕ್ಕಿ ~ದಂಡ~ ವಿಧಿಸುವುದಾಗಿ ಎಚ್ಚರಿಸಿ ಸಾವಿರಾರು ರೂಪಾಯಿ ಹಣವನ್ನು ಜೇಬಿಗಿಳಿಸಿ ಜಾಗ ಖಾಲಿ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.