ಸಾಮರಸ್ಯ ಇದ್ದರೆ ಅಧಿಕಾರ

7

ಸಾಮರಸ್ಯ ಇದ್ದರೆ ಅಧಿಕಾರ

Published:
Updated:

ರಾಯಚೂರು: ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ನಾಯಕ ಹಾಗೂ ಕಾರ್ಯಕರ್ತರಲ್ಲಿ ಒಗ್ಗಟ್ಟು ಇಲ್ಲದೇ ಇದ್ದರೆ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಕೇಂದ್ರದ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.ಶುಕ್ರವಾರ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರೂ ರಾಜ್ಯದ ಜನತೆ ಮರೆತಿದ್ದಾರೆ.ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದರೂ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಅನವಶ್ಯಕವಾಗಿ ಜನವಿರೋಧಿ ನೀತಿ ಎಂಬ ಆರೋಪಗಳನ್ನು ಮಾಡುತ್ತಿವೆ ಎಂದು ಟೀಕಿಸಿದರು.ಕಲ್ಲಿದ್ದಲು ಅವ್ಯವಹಾರ ನಡೆದಿದೆ ಎಂಬ ಬಗ್ಗೆ ಬಿಜೆಪಿ ಪಕ್ಷವು ಆರೋಪ ಮಾಡಿದೆ. ಆದರೆ, ಆರೋಪದ ಬಗ್ಗೆ ಅಧಿವೇಶನಲ್ಲಿ ಚರ್ಚೆ ನಡೆಸಲಿಲ್ಲ. ಅಲ್ಲದೇ ಅಧಿವೇಶನ ನಡೆಯದಂತೆ ಅಡ್ಡಿಪಡಿಸಿದರು. 1.85 ಲಕ್ಷಕೋಟಿ ಕಲ್ಲಿದ್ದಲು ಅವ್ಯವಹಾರ ನಡೆದಿದೆ ಎಂದು ದೇಶದ ಜನತೆ ತಪ್ಪು ಸಂದೇಶವನ್ನು ರವಾನಿಸುವ ಕಾರ್ಯಕ್ರಮ ಬಿಜೆಪಿ ಪಕ್ಷ ಮುಳುಗಿದೆ ಎಂದು ಆಪಾದಿಸಿದರು.ದಕ್ಷ ಪ್ರಧಾನಮಂತ್ರಿಯಾಗಿರುವ ಡಾ.ಮನಮೋಹನ್ ಸಿಂಗ್ ಅವರ ಆರೋಪ ಮಾಡುವುದರಲ್ಲಿ ಬಿಜೆಪಿ ಕಾಲ ಕಳೆಯಲಾಗುತ್ತಿದೆ. ಅಡುಗೆ ಅನಿಲ ಬೆಲೆ ಏರಿಕೆ, ಎಫ್‌ಡಿಐ ಕುರಿತು ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ, 0-6 ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕಲ್ಪಿಸುತ್ತಿರುವುದು ಹಾಗೂ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಮಾಡಿರುವುದು ಜನವಿರೋಧಿ ನೀತಿಯೇ ಎಂದು ಪ್ರಶ್ನಿಸಿದರು.ದೇಶದಲ್ಲಿ ಶೇ 26ರಷ್ಟು ಮಾತ್ರ ತೈಲ ಉತ್ಪಾದನಾ ಸಾಮರ್ಥ್ಯ ಹೊಂದಿದೆ.ಆದರೆ, ಶೇ 74ರಷ್ಟು ತೈಲ ಉತ್ಪನ್ನಗಳನ್ನು  ಹೊರದೇಶದಿಂದ ತರುವಂಥ ಪರಿಸ್ಥಿತಿ ಇದೆ. ಇದರಿಂದ ವಿದೇಶದ ಬೆಲೆ ಏರಿಕೆಯಾದರೂ ಇಲ್ಲಿಯೂ ಬೆಲೆ ಏರಿಕೆ ಅಗತ್ಯ ಇದೆ. ಕೇಂದ್ರ ಸರ್ಕಾರ 1.85 ಲಕ್ಷ ಕೋಟಿಗಳಷ್ಟು ತೈಲ ಉತ್ಪನ್ನಗಳಿ ರಿಯಾಯ್ತಿ (ಸಬ್ಸಿಡಿ) ನೀಡಲಾಗುತ್ತಿದೆ ಎಂದು ವಿವರಿಸಿದರು.65ರಿಂದ 72 ಸಾವಿರ ಕೋಟಿಗಳಷ್ಟು ರಸಗೊಬ್ಬರಗಳ ವಿತರಣೆಗೆ ಸಹಾಯಧನ ನೀಡಲಾಗುತ್ತಿದೆ. ಇಂಥ ಅನೇಕ ಯೋಜನೆಗಳನ್ನು ಕಾಂಗ್ರೆಸ್ ಕೈಗೊಂಡರೂ ಬಿಜೆಪಿ ಜನವಿರೋಧಿ ಎಂದು ಆರೋಪಿಸುತ್ತಿದೆ. ಇಂಥ ಬುಟಾಟಿಕೆ ಮಾಡುತ್ತಿರುವ ಬಿಜೆಪಿಗೆ ಮುಂದಿನ ಚುನಾವಣೆಗಳಲ್ಲಿ ತಕ್ಕಪಾಠ ಕಲಿಸಲು ಕಾರ್ಯಕರ್ತರು ಮುಂದಾಗಬೇಕು ಎಂದು ಹೇಳಿದರು.ಕೇಂದ್ರದ ಇಂಧನ ಖಾತೆ ಸಚಿವ ಎಂ.ವೀರಪ್ಪ ಮೊಯಿಲಿ ಮಾತನಾಡಿ, ಅಕ್ರಮ ಗಣಗಾರಿಕೆ ಬಗ್ಗೆ ಲೋಕಾಯುಕ್ತರ ನೀಡಿರುವ ವರದಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ರಾಜ್ಯ ಸರ್ಕಾರವು ಮುಂದಾಗಿಲ್ಲ ಎಂದು ಆರೋಪಿಸಿದರು.ರಾಜ್ಯದ 35 ಲಕ್ಷ ಜನರಿಗೆ ಅಕ್ರಮ ಸಕ್ರಮ ಭೂ ಸಾಗುವಳಿ ಮಾಡಿದ ಮಹತ್ವದ ಕಾರ್ಯ ಹಾಗೂ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಮೀಸಲಾತಿ ಜಾರಿ ತಂದಿರುವುದು ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ತಿಳಿಸಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಯಾವುದೇ ರೀತಿಯಲ್ಲಿ ಬದ್ಧತೆ ಇಲ್ಲ.ರಾಜ್ಯದಲ್ಲಿ ಸ್ವಾರ್ಥಅಧಿಕಾರಿ ನಡೆಸಲಾಗುತ್ತಿದೆ.ಇಂಥ ಅನೇಕ ಜನಪರ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಕ್ಷ ನಡೆಸಿದರೂ ಕಾಂಗ್ರೆಸ್‌ನ ವಿರುದ್ಧ ಅನಗತ್ಯ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.ಈ ಭಾಗದ ಅಭಿವೃದ್ಧಿಗಾಗಿ 371ನೇ ಕಲಂ ತಿದ್ದುಪಡಿಗೆ ಹಿಂದೆ ಕೇಂದ್ರದ ಗೃಹಮಂತ್ರಿ ಎಲ್.ಕೆ ಆಡ್ವಾನಿ ಅವರು ತಿದ್ದುಪಡಿ ಮಾಡಲು ಬರುವುದಿಲ್ಲವೆಂದು ತಿರಸ್ಕರಿಸಿದ್ದರು. ಸಂವಿಧಾನ 371ನೇ ಕಲಂ ತಿದ್ದುಪಡಿಗೆ ಬಿಜೆಪಿ ಸಂಸದರು ಅಧಿವೇಶನ ನಡೆಸದಂತೆ ಅಡ್ಡಿಪಡಿಸಿದ್ದರು.ಆದರೂ ತಿದ್ದುಪಡಿಗೊಳಿಸುವ ನಿಟ್ಟಿನಲ್ಲಿ ಸಂಸದೀಯ ಸಮಿತಿಯಿಂದ ಅನುಮೋದನೆ ನೀಡಲಾಯಿತು ಎಂದು ವಿವರಿಸಿದರು.ತಾವು ಈ ಮಟ್ಟಕ್ಕೆ ಬರಲು ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇ ಕಾರಣ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ.ವಸಂತಕುಮಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಸಂಸದ ಎ.ವೆಂಕಟೇಶ ನಾಯಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಎನ್.ಎಸ್ ಬೋಸರಾಜ, ಕೆಪಿಸಿಸಿ ಸದಸ್ಯ ಪಾರಸಮಲ್ ಸುಖಾಣಿ, ಶಾಸಕರಾದ ರಾಜಾ ರಾಯಪ್ಪ ನಾಯಕ, ಹಂಪಯ್ಯನಾಯಕ,ಸಯ್ಯದ್‌ಯಾಸಿನ್, ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ, ಬಸವರಾಜ ಪಾಟೀಲ್ ಇಟಗಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶರಣಪ್ಪ ಕಲ್ಮಲಾ, ಮಾಜಿ ಸದಸ್ಯರಾದ ಬಷೀರುದ್ದೀನ್, ಸಿದ್ಧರಾಮಪ್ಪ ನೀರಮಾನ್ವಿ,ಪಾಮಯ್ಯ ಮುರಾರಿ, ರಾಜಶೇಖರ, ನಗರಸಭೆ ಸದಸ್ಯರಾದ ಕೆ.ಶಾಂತಪ್ಪ, ಜಿ.ಶಿವಮೂರ್ತಿ,ಈಶಪ್ಪ, ನಗರ ಘಟಕದ ಅಧ್ಯಕ್ಷ ಜಿ.ಬಸವರಾಜರೆಡ್ಡಿ, ಶರಣಪ್ಪ ಮೇಟಿ, ನಗರಸಭೆ ಮಾಜಿ ಸದಸ್ಯ ಎಂ.ಕೆ ಬಾಬರ್, ಉಮೇಶ ಬಳಿಗಾರ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು. ಅಮರೇಗೌಡ ಹಂಚಿನಾಳ ನಿರೂಪಿಸಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry