ಸಾಮರ್ಥ್ಯಕ್ಕೆ ತಕ್ಕ ಗುರಿಯಿರಲಿ:ಕರ್ಜಗಿ

7

ಸಾಮರ್ಥ್ಯಕ್ಕೆ ತಕ್ಕ ಗುರಿಯಿರಲಿ:ಕರ್ಜಗಿ

Published:
Updated:

ಬಾಗಲಕೋಟೆ: ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಗುರಿಯೊಂದನ್ನು ಹೊಂದಿರಬೇಕು, ಹಗಲುಗನಸಿನಲ್ಲಿ ತೇಲಾಡುವ ಗುರಿ ಹೊಂದುವ ಬದಲು ಗುರಿ ಕಣ್ಣಿಗೆ ಕಾಣುವ, ಕೈಗೆ ಎಟಕುವಂತಹ ವಾಸ್ತವ ಗುರಿ ಹೊಂದಬೇಕು ಎಂದು `ಪ್ರಜಾ ವಾಣಿ' ಅಂಕಣಕಾರ, ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಹೇಳಿದರು.ನವನಗರದ ಕಲಾಭವನದಲ್ಲಿ ಶ್ರೀರಂಗನಾಥ ಅಂತರರಾಷ್ಟ್ರೀಯ ಶಾಲೆಯು ಭಾನುವಾರ ಏರ್ಪಡಿಸಿದ್ದ `ಎಸ್‌ಎಸ್‌ಎಲ್‌ಸಿ ನಂತರ ಓದಬಹು ದಾದ ವಿವಿಧ ಕೋರ್ಸ್‌ಗಳು ಮತ್ತು ಉದ್ಯೋಗವಕಾಶಗಳ ಕುರಿತು ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಯಾವುದೇ ವೃತ್ತಿಗೆ ಹೋಗ ಬೇಕಾದರೇ ಜ್ಞಾನ, ಕೌಶಲದ ಜೊತೆಗೆ ಮನೋಧರ್ಮವೂ ಮುಖ್ಯವಾಗು ತ್ತದೆ ಎಂದ ಅವರು, ವಿದ್ಯಾಭ್ಯಾಸ ಮಾಡುವ ಮುನ್ನ ಯೋಚಿಸಿ, ಆಲೋ ಚಿಸಿ ಕೋರ್ಸ್‌ಗಳನ್ನು ಆಯ್ಕೆ ಮಾಡಿ ಕೊಳ್ಳಬೇಕು. ಪ್ರತಿಯೊಬ್ಬರು ತಮ್ಮ ಮನಸ್ಸಿನಲ್ಲಿ ಏನಾಗಬೇಕೆಂದುಕೊಂಡಿ ರುತ್ತಾರೆಯೇ ಅದಾ ದರೆ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.ಯಾರೊಬ್ಬರು ನೌಕರಿಗಾಗಿ ಓದ ಬೇಡಿ, ಸುಂದರ ಬದುಕಿಗಾಗಿ ಓದಿ, ಸಂಬಳದ ಹಿಂದೆ ಹೋದರೆ ಸುಖ  ಸಿಗುವುದಿಲ್ಲ, ಸುಖದ ಹಿಂದೆ ಹೋದರೆ ಸಂಬಳ ಸಿಗುತ್ತದೆ ಎಂದರು. ವೈದ್ಯನಾಗಬೇಕೆಂದರೆ ಅದಕ್ಕೆ ತಕ್ಕ ಶ್ರಮ ಅಗತ್ಯ, ರೋಗಿಗಳನ್ನು ಪ್ರೀತಿ ಯಿಂದ ನೋಡುವ ಗುಣ ಇರಬೇಕು, ದಿನದ 24 ಗಂಟೆಯಲ್ಲಿ ಯಾವ ಸಂದರ್ಭದಲ್ಲಾದರೂ ಕೆಲಸ ಮಾಡುವ ಆಸಕ್ತಿ ಹೊಂದಿರಬೇಕು, ಮಧ್ಯ ರಾತ್ರಿ ಕರೆದರೂ ರೋಗಿಗೆ ಚಿಕಿತ್ಸೆ ನೀಡುವ ಮನೋಭಾವ ಇದ್ದರೆ ಮಾತ್ರ ವೈದ್ಯ ನಾಗಬೇಕು ಎಂದು  ಹೇಳಿದರು.ದೈಹಿಕ, ಮಾನಸಿಕ ಮತ್ತು ಬುದ್ದಿ ಮತ್ತೆಗೆ ಅನುಗುಣವಾದ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡು ಓದುವ ಮೂಲಕ ಅರ್ಹತೆಗೆ ಅನುಗುಣವಾದ ಉದ್ಯೋಗ ಮಾಡಬೇಕು ಎಂದು ಸಲಹೆ ನೀಡಿದರು.

ಎಸ್‌ಎಸ್‌ಎಲ್‌ಸಿ ಮುಗಿಸಿದ ಬಳಿಕ ಎರಡು ವರ್ಷದ ಪಿಯುಸಿ ವಿಜ್ಞಾನ, ಕಲೆ, ವಾಣಿಜ್ಯ ಕೋರ್ಸ್, ಮೂರು ವರ್ಷಾವಧಿಯ ತಾಂತ್ರಿಕ ಡಿಪ್ಲೊಮಾ ಕೋರ್ಸ್, ಎರಡು ವರ್ಷಾವಧಿಯ ಐಟಿಐ, ಎರಡು ವರ್ಷಾವಧಿಯ ಮೆಡಿ ಕಲ್ ಟೆಕ್ನಿಷಿಯನ್ಸ್ ಕೋರ್ಸ್, ಡಿಪ್ಲೊಮಾ ಇನ್ ಬ್ಯೂಟಿಷಿಯನ್, ಪ್ಯಾಶನ್ ಡಿಸೈನ್, ಗಾರ್ಮೆಂಟ್ಸ್ ಡಿಸೈನ್, ಹಾರ್ಡ್‌ವೇರ್ ಟೆಕ್ನಾಲಜಿ, ಇನ್ನಿತರೆ ಕೋರ್ಸ್ ಗಳನ್ನು ಓದಲು ಅವಕಾಶವಿದೆ ಎಂದರು.ಎಸ್‌ಎಸ್‌ಎಲ್‌ಸಿ ಮುಗಿಸಿದವರು ಎಲ್‌ಐಸಿ ಏಜೆಂಟ್, ರೈಲ್ವೆ ಇಲಾಖೆ ಯಲ್ಲಿ ಟಿಸಿ ಕಲೆಕ್ಟರ್, ಅಟೆಂಡರ್, ಅಂಚೆ ಪೇದೆ, ಕೋರಿಯರ್ ಸರ್ವಿಸ್, ಪೊಲೀಸ್ ಪೇದೆ, ಆಟೋ ಮೊಬೈಲ್ ಸರ್ವಿಸ್, ಖಾಸಗಿ ಕಂಪೆನಿಗಳಲ್ಲಿ ವಿವಿಧ ಉದ್ಯೋಗ, ಎಲೆಟ್ರಿಕಲ್ ಸರ್ವಿಸ್‌ನಲ್ಲಿ ಉದ್ಯೋಗ ಮಾಡಬಹುದು ಎಂದರು.ಯಾವುದೇ ಕೆಲಸ ಒಳ್ಳೆಯದು, ಕೆಟ್ಟದ್ದು ಎಂದು ಇರುವುದಿಲ್ಲ, ಮಾಡುವ ವ್ಯಕ್ತಿ ಮೇಲೆ ಕೆಟ್ಟದ್ದು, ಒಳ್ಳೆಯದು ನಿರ್ಧಾರವಾಗುತ್ತದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾ ಸಾಗರ, ವಿದ್ಯಾರ್ಥಿಗಳು ಕಷ್ಟಪಟ್ಟು ಓದದೇ, ಇಷ್ಟಪಟ್ಟು ಓದಬೇಕು, ಪ್ರೀತಿಯಿಂದ ಓದಿದರೆ ನಮ್ಮನ್ನು ನಾವು ಅನಾವರಣಗೊಳಿಸಿಕೊಳ್ಳಲು ಮತ್ತು ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ ಎಂದು ಹೇಳಿದರು.ಶಾಲೆಯ ಅಧ್ಯಕ್ಷ ಹೀರಾಲಾಲ್‌ಸಾ ಕಾವಡೆ, ಡಿಡಿಪಿಐ ಎ.ಎಂ. ಮಡಿವಾಳರ, ಆಡಳಿತಾಧಿಕಾರಿ ಶ್ರೀರಂಗ ಕಾಸನಿ,ಕಾರ್ಯದರ್ಶಿ ರುಕ್ಮಸಾ ಕಾವಡೆ, ಪ್ರಾಂಶುಪಾಲ ರಘು ವೀರ, ಉಪ ಪ್ರಾಂಶುಪಾಲ ಅರವಿಂದ ಮರಳಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry