ಸಾಮರ್ಥ್ಯ ವೃದ್ಧಿಗೆ ತರಬೇತಿ ಪೂರಕ: ಬಿ.ಎಲ್. ಚಂದ್ರಶೇಖರ್

7

ಸಾಮರ್ಥ್ಯ ವೃದ್ಧಿಗೆ ತರಬೇತಿ ಪೂರಕ: ಬಿ.ಎಲ್. ಚಂದ್ರಶೇಖರ್

Published:
Updated:
ಸಾಮರ್ಥ್ಯ ವೃದ್ಧಿಗೆ ತರಬೇತಿ ಪೂರಕ: ಬಿ.ಎಲ್. ಚಂದ್ರಶೇಖರ್

ಬೀದರ್: ಸಾಮರ್ಥ್ಯ ವೃದ್ಧಿಗೆ ತರಬೇತಿಗಳು ಪೂರಕವಾಗಿವೆ ಎಂದು ಗುಲ್ಬರ್ಗದ ಉದ್ಯೋಗ ಮತ್ತು ತರಬೇತಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಲ್. ಚಂದ್ರಶೇಖರ್ ಅಭಿಪ್ರಾಯಪಟ್ಟರು.ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಗುಲ್ಬರ್ಗ ವಿಭಾಗ ಮಟ್ಟದ ವಿಷಯ ನಿರ್ವಾಹಕರ ಪರಿಚಯಾತ್ಮಕ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಅನಗತ್ಯ ವಿಷಯಗಳಿಂದ ಮನಸ್ಸು ಚಂಚಲಗೊಳ್ಳುತ್ತದೆ. ಆದ್ದರಿಂದ ಅತ್ತ ಕಡೆಗೆ ಗಮನ ಹರಿಸದೆ ಅಗತ್ಯ ವಿಷಯಗಳಲ್ಲಿ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.ಪ್ರಾಚಾರ್ಯ ಶಿವಶಂಕರ ಟೋಕರೆ ಮಾತನಾಡಿದರು. ಪ್ರಮುಖರಾದ ಸಂಜೀವಕುಮಾರ, ತನುಜಾ, ಮಹೇಶ, ಶರಣಬಸಪ್ಪ ಮಡಿವಾಳ್ ಉಪಸ್ಥಿತರಿದ್ದರು. ಸೈಯದ್ ಅಕ್ಬರ್ ಪಾಶಾ ಸ್ವಾಗತಿಸಿದರು. ಶರಣಬಸಪ್ಪ ಮಡಿವಾಳ್ ನಿರೂಪಿಸಿದರು. ಯುಸೂಫ್‌ಮಿಯ್ಯೊ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry