ಸಾಮರ್ಥ್ಯ ಹೆಚ್ಚಿದೆ

7

ಸಾಮರ್ಥ್ಯ ಹೆಚ್ಚಿದೆ

Published:
Updated:
ಸಾಮರ್ಥ್ಯ ಹೆಚ್ಚಿದೆ

ಹಳ್ಳಿಯ ಕನ್ನಡ ಶಾಲೆಯಲ್ಲಿ ಓದಿದ ನನಗೆ ಕಷ್ಟಗಳನ್ನು ಎದುರಿಸುವುದು ಸುಲಭ. ಹಳ್ಳಿಯ ಬದುಕು ಮತ್ತು ಕನ್ನಡದ ಓದು ನನ್ನನ್ನು ಮಾನಸಿಕವಾಗಿ ದೃಢವಾಗಿ ರೂಪಿಸಿದೆ. ಎಂಸಿಎ ಮಾಡಿ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಪಡೆದು ದೇಶ ಬಿಟ್ಟು ಬೇರೆ ದೇಶಕ್ಕೆ ಬಂದರೂ ಎದೆಗುಂದದೆ ಸ್ವತಂತ್ರವಾಗಿ ಬದುಕು ಕಟ್ಟಿಕೊಂಡಿದ್ದೇನೆ. ಕನ್ನಡದ ಹುಡುಗರಿಗೆ ಮಾನಸಿಕ ಸಾಮರ್ಥ್ಯ ಹೆಚ್ಚು ಅನ್ನುವುದು ನನ್ನ ಅಭಿಮತ. ನನ್ನ ಜತೆ ಓದಿದವರು ವೃತ್ತಿಯಲ್ಲಷ್ಟೇ ಅಲ್ಲ, ಬದುಕಿನಲ್ಲೂ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿ, ಸುಖದ ಬದುಕು ಕಟ್ಟಿಕೊಂಡಿದ್ದಾರೆ.ಚಿಕ್ಕಮಕ್ಕಳು ಮಾತೃಭಾಷೆಯಲ್ಲೇ ಓದಬೇಕು. ಇದರಿಂದ ಯಾವ ವಿಷಯವನ್ನಾದರೂ ಸುಲಭವಾಗಿ ಗ್ರಹಿಸಲು ಸಾಧ್ಯ. ಅತ್ತ ಕನ್ನಡವನ್ನು ಕಲಿಯದೇ ಇತ್ತ ಇಂಗ್ಲಿಷ್ ಬಾರದೇ ಅತಂತ್ರರಾಗುವುದಕ್ಕಿಂತ ಕನ್ನಡದಲ್ಲೇ ಆರಂಭಿಕ ಶಿಕ್ಷಣ ಪಡೆದರೆ ನಮ್ಮ ಸಾಮರ್ಥ್ಯ ವೃದ್ಧಿಯಾಗುತ್ತದೆ.ಇದು ನನ್ನ ಅನುಭವ. ಕನ್ನಡದಲ್ಲಿ ಕಲಿತಿದ್ದ ಕಾರಣ ನಾನು ಇಂದು ಮಾನಸಿಕವಾಗಿ ಹೆಚ್ಚು ದೃಢವಾಗಿದ್ದೆೀನೆ.ಐ.ಸಿ. ವಿಜಯಕುಮಾರ್ (ಅಮೆರಿಕದ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಟೀಂ ಲೀಡರ್) (ಹುಟ್ಟೂರು ದಾವಣಗೆರೆ ತಾಲ್ಲೂಕು ಕಕ್ಕರಗೊಳ್ಳ)

(ನಿರೂಪಣೆ: ಮಂಜುಶ್ರೀ ಕಡಕೋಳ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry