ಭಾನುವಾರ, ಜೂನ್ 20, 2021
28 °C

ಸಾಮಾಜಿಕ ಕಾಳಜಿಗಾಗಿ ‘ಫ್ಲ್ಯಾಷ್‌ ಮಾಬ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನರಿಂದ ಕಿಕ್ಕಿರಿದಿರುವ ವಿಮಾನ ನಿಲ್ದಾಣ, ರೈಲ್ವೆ ಸ್ಟೇಷನ್‌, ಬಸ್‌ ನಿಲ್ದಾಣ, ಕಾಲೇಜು ಕ್ಯಾಂಪಸ್‌ ಹಾಗೂ ಜನಜಂಗುಳಿ ಪ್ರದೇಶಗಳಲ್ಲಿ ಅಥವಾ ಮಾಲ್‌ಗಳಲ್ಲಿ ಇದ್ದಕ್ಕಿದ್ದಂತೆ ಸಂಗೀತ ಕಾರ್ಯಕ್ರಮ ನೀಡಿ ಜನರನ್ನು ಸೆಳೆಯುವ ಫ್ಲ್ಯಾಷ್ ಮಾಬ್‌ ಸಂಸ್ಕೃತಿ ಹೆಚ್ಚುತ್ತಿದೆ.ಎಂ.ಎಸ್‌. ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಮಾಜಿಕ ಕಾಳಜಿಯ ಪ್ರಚಾರ ಕಾರ್ಯಕ್ರಮಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಈ ಫ್ಲ್ಯಾಷ್‌ ಮಾಬ್‌ ಅನ್ನು. ‘ಚೈಲ್ಡ್ ರೈಟ್ಸ್ ಅಂಡ್‌ ಯೂ’ ಸ್ವಯಂ ಸೇವಾ ಸಂಸ್ಥೆ  (ಸಿಆರ್‌ವೈ) ಸಹಯೋಗದೊಂದಿಗೆ ‘ವೋಟ್‌ ಫಾರ್‌ ಚೈಲ್ಡ್‌ ರೈಟ್ಸ್‌’ ಪ್ರಚಾರಕ್ಕಾಗಿ ಫ್ಲ್ಯಾಷ್‌ ಮಾಬ್‌ ಹಮ್ಮಿಕೊಳ್ಳಲಾಗಿತ್ತು. ಮೂರರಿಂದ ನಾಲ್ಕು ನಿಮಿಷ ವಿದ್ಯಾರ್ಥಿಗಳು ನೃತ್ಯ ಮಾಡಿ ರಂಜಿಸಿದರು. ಜೊತೆಗೆ ಮಕ್ಕಳ ಹಕ್ಕುಗಳ ಕುರಿತ ಕಿರು ನಾಟಕವನ್ನು ಪ್ರದರ್ಶಿಸಿದರು.ಸಿಆರ್‌ವೈನ ಹಿರಿಯ ವ್ಯವಸ್ಥಾಪಕರಾದ ತಂಗಮ್ಮ ಮೋನಪ್ಪ, ವಿದ್ಯಾರ್ಥಿ ಸಮನ್ವಯಾಧಿಕಾರಿ ವಿರಳ್‌ ಷಾ ಕಾರ್ಯಕ್ರಮ ಕುರಿತು ಮಾತನಾಡಿದರು. ಕಳೆದ ನವೆಂಬರ್‌ 13ರಿಂದ ರಾಷ್ಟ್ರಮಟ್ಟದಲ್ಲಿ ಮಕ್ಕಳ ಹಕ್ಕುಗಳಿಗೆ ಮತ ಪ್ರಚಾರ ಆಂದೋಲನ ಆರಂಭವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.