ಸಾಮಾಜಿಕ ಜಾಲತಾಣ ದುರ್ಬಳಕೆ: ಪ್ರಧಾನಿ ಆಕ್ರೋಶ

7
ರಾಷ್ಟ್ರೀಯ ಭಾವೈಕ್ಯ ಮಂಡಳಿ ಸಭೆ

ಸಾಮಾಜಿಕ ಜಾಲತಾಣ ದುರ್ಬಳಕೆ: ಪ್ರಧಾನಿ ಆಕ್ರೋಶ

Published:
Updated:
ಸಾಮಾಜಿಕ ಜಾಲತಾಣ ದುರ್ಬಳಕೆ: ಪ್ರಧಾನಿ ಆಕ್ರೋಶ

ನವದೆಹಲಿ (ಐಎಎನ್‌ಎಸ್‌/ಪಿಟಿಐ): ಸಾಮಾಜಿಕ ಸಾಮರಸ್ಯ ಮತ್ತು ಏಕತೆಗೆ ಭಂಗ ತರುವ ದುಷ್ಕೃತ್ಯಗಳಿಗೆ ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಯುವುದು ಅಗತ್ಯವಾಗಿದೆ ಎಂದು ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಹಲವು ರಾಜ್ಯ­ಗಳ ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.ರಾಜಧಾನಿಯಲ್ಲಿ ಸೋಮವಾರ ನಡೆದ ಒಂದು ದಿನದ ರಾಷ್ಟ್ರೀಯ ಭಾವೈಕ್ಯ ಮಂಡಳಿ (ಎನ್‌ಐಸಿ) ಸಭೆ ಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.ಮುಜಫ್ಫರ್‌ ನಗರದಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆ ಹಿನ್ನೆಲೆಯಲ್ಲಿ ಪ್ರಧಾನಿ ಸಿಂಗ್‌ ಕರೆದಿದ್ದ ಈ ಸಭೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯ ಮಂತ್ರಿಗಳು, ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಮುಜಫ್ಫರ್‌ ನಗರದ ಕೋಮುಗಲಭೆ ಸಂದಭ ರ್ದಲ್ಲಿ ಸಾಮಾಜಿಕ ಜಾಲತಾಣ ಗಳಲ್ಲಿ ಎಗ್ಗಿಲ್ಲದೆ ಹರಿದಾಡಿದ ದ್ವೇಷ ಪೂರಿತ ಮತ್ತು ಆಕ್ಷೇಪಾರ್ಹ ಸಂದೇಶ ಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತ ವಾಯಿತು. ಸಾಮಾಜಿಕ ಜಾಲತಾಣಗಳ ದುರ್ಬಳ ಕೆಗೆ ಕಡಿವಾಣ ಹಾಕುವಂತೆ ಸಭೆಯಲ್ಲಿ ಭಾಗವಹಿ ಸಿದ್ದ ಎಲ್ಲ ಮುಖ್ಯಮಂತ್ರಿಗಳು  ಸಲಹೆ ನೀಡಿದರು.ಇದಕ್ಕೆ ಪೂರಕವಾಗಿ ಮಾತನಾಡಿದ ಪ್ರಧಾನಿ ಸಿಂಗ್‌, ಚುನಾವಣೆಗಳು ಹತ್ತಿರ ದಲ್ಲಿರುವಾಗ  ಪಕ್ಷ ಗಳು  ರಾಜಕೀಯ ಲಾಭ ಕ್ಕಾಗಿ ಗಳನ್ನು ಬಳಸಿಕೊಳ್ಳುವ ಪ್ರವೃತ್ತಿ ನಿಲ್ಲಿಸಬೇಕು ಎಂದು ಮನವಿ ಮಾಡಿದರು.ಸ್ವಾತಂತ್ರ್ಯ ಬಂದು 60 ವರ್ಷಗಳಾದರೂ ಮಹಿಳೆಯರು, ಅಲ್ಪಸಂಖ್ಯಾತರು, ದಲಿತರ ಮೇಲೆ ಇನ್ನೂ ದೌರ್ಜನ್ಯ  ನಡೆಯುತ್ತಿರುವುದು ನಾಚಿಕೆ ಗೇಡು ಎಂದು ಪ್ರಧಾನಿ ವಿಷಾದ ವ್ಯಕ್ತಪಡಿಸಿದರು. ಕೋಮುಗಲಭೆ ಸಂದರ್ಭ ದಲ್ಲಿ ಕಿಡಿಗೇಡಿಗಳು ಸಾಮಾ ಜಿಕ ಜಾಲ ತಾಣ ಗಳನ್ನು ದುರ್ಬಳಕೆ ಮಾಡಿ ಕೊಳ್ಳ ದಂತೆ ಕಡಿವಾಣ ಹಾಕ ಬೇಕಿದೆ ಎಂದರು.ಸಾಮಾಜಿಕ ಜಾಲ ತಾಣಗಳು ಹೊಸ ಆಲೋ ಚನೆಗಳನ್ನು ನೀಡುವ ಮತ್ತು ಮನಸ್ಸುಗಳನ್ನು ಬೆಸೆ ಯುವ ತಾಣಗಳಾ ಗಬೇಕೆ ಹೊರತು ದ್ವೇಷ ಬಿತ್ತುವ ಕೇಂದ್ರಗಳಾಗಬಾರದು. ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಕಿಡಿಗೇಡಿಗಳು ಈ ಜಾಲತಾಣ ಗಳನ್ನು ದುರುಪಯೋಗ ಪಡಿಸಿ ಕೊಳ್ಳ ದಂತೆ ಕ್ರಮ ಕೈಗೊಳ್ಳಬೇಕಿದೆ ಎಂದರು.ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಸೇರಿದಂತೆ ಬಹುತೇಕ ಮುಖ್ಯಮಂತ್ರಿ ಗಳು ಇದಕ್ಕೆ ಧ್ವನಿಗೂಡಿಸಿದರು. ಸ್ಥಳೀಯವಾಗಿ ಬಗೆ ಹರಿಸಬಹುದಾದ ವಾಹನ ಅಪಘಾತ, ಯುವತಿಯರನ್ನು ಚುಡಾಯಿಸಿದ ಚಿಕ್ಕ ಪುಟ್ಟ ಘಟನೆಗಳನ್ನು ಕೆಲವು ಸ್ಥಾಪಿತ ಹಿತಾಸಕ್ತಿಗಳು ಉದ್ದೇಶ ಪೂರ್ವಕವಾಗಿಯೇ ದೊಡ್ಡದು ಮಾಡ ಲಾಗಿದೆ. ಮುಜಫ್ಫರ್‌ ನಗರ ಕೋಮುಗಲಭೆ ಸಂದಭರ್ದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಕಲಿ ವೀಡಿಯೊ ಮತ್ತು ಚಿತ್ರಗಳು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿವಿದವು ಎಂದು ಅಖಿಲೇಶ್‌ ಅಸಮಾಧಾನ ಹೊರಹಾಕಿದರು.ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ, ಕನಾರ್ಟಕದ ಮುಖ್ಯಮಂತ್ರಿ ಸಿದ್ಧ ರಾಮಯ್ಯ, ಛತ್ತೀಸ್‌ಗಡ ಮುಖ್ಯಮಂತ್ರಿ ರಮಣ್‌ ಸಿಂಗ್‌ ಸೇರಿ ಅನೇಕರು ಸಭೆಗೆ ಹಾಜರಾಗಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry