ಸೋಮವಾರ, ಜೂನ್ 14, 2021
27 °C

ಸಾಮಾಜಿಕ ತಾಣದಲ್ಲಿ ವಾಲ್ ನಿವೃತ್ತಿ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವಾಲ್~ ಖ್ಯಾತಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆ ಇದೆ ಎನ್ನುವ ಸುದ್ದಿ ಹರಡಿದ್ದೇ ತಡ ಸಾಮಾಜಿಕ ತಾಣಗಳ `ವಾಲ್ ಪೋಸ್ಟ್~ ತುಂಬಾ ಭಾರಿ ಚರ್ಚೆ.

ರಾಹುಲ್ ಬಗ್ಗೆ ಒಂದಿಷ್ಟು ಮಾಹಿತಿ
*ಮೊದಲ ಟೆಸ್ಟ್ ಆಡಿದ್ದು 1996ರ ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ

*ಆಡಿದ ಪ್ರಥಮ ಇನಿಂಗ್ಸ್‌ನಲ್ಲಿಯೇ 95 ರನ್‌ಗಳ ಸಾಧನೆ

* ಈ ವರ್ಷದ ಆದಿಯಲ್ಲಿ ಅಡಿಲೇಡ್‌ನಲ್ಲಿ ಆಡಿದ್ದು ಸದ್ಯಕ್ಕೆ ಕೊನೆಯ ಟೆಸ್ಟ್

ಅಂತರಜಾಲ ತಾಣಗಳಲ್ಲಿ ರಾಹುಲ್ ಗುಣಗಾನವೂ ನಡೆಯಿತು. ಸಂಜೆಯ ಹೊತ್ತಿಗೆ ವಿವಿಧ ತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ವಿಭಿನ್ನವಾದ ಅಭಿಪ್ರಾಯಗಳು ಹರಿದವು.`ದ್ರಾವಿಡ್ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತಗೆದುಕೊಂಡಿದ್ದಾರೆ~, `ದ ವಾಲ್ ಆಫ್ ಇಂಡಿಯಾ ಆಟ ಸುದೀರ್ಘ ನೆನಪಾಗಿ ಉಳಿಯಲಿದೆ~, `ನಿಮ್ಮ ಬ್ಯಾಟಿಂಗ್ ಮತ್ತೆ ಮತ್ತೆ ನೋಡಬೇಕು ಎನ್ನುವ ಆಸೆ~, `ಯುವ ಕ್ರಿಕೆಟಿಗರಿಗೆ ಮಾದರಿ~, `ನಿಮ್ಮ ಬದ್ಧತೆಯ ಗುಣ ಎಲ್ಲರಿಗೂ ಬರಲಿ~... ಹೀಗೆ ಸಾವಿರಾರು ಮೆಚ್ಚುಗೆಯ ನುಡಿಗಳ ಸುರಿಮಳೆ. ದ್ರಾವಿಡ್ ನಿವೃತ್ತಿ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡುವ ಮೊದಲೇ ಅವರ ವಿದಾಯದ ಚರ್ಚೆ ಚುರುಕು ಪಡೆದಿದ್ದು ವಿಶೇಷ.`ರಾಷ್ಟ್ರದ ಕ್ರಿಕೆಟ್‌ಗೆ ನೀಡಿರುವ ಕೊಡುಗೆಯನ್ನು ಎಂದಿಗೂ ಮರೆಯಲಾರೆವು. ಭಾರತ ಟೆಸ್ಟ್ ತಂಡಕ್ಕೆ ನಿಮ್ಮ ಅಗತ್ಯ ಇನ್ನೂ ಇದೆ, ನಿವೃತ್ತಿ ಈಗಲೇ ಬೇಡ. ನಿಮ್ಮ ಸ್ಥಾನ ತುಂಬಬಲ್ಲ ಆಟಗಾರನನ್ನು ಇನ್ನೂ ಹುಡುಕಬೇಕಾಗಿದೆ. ಕ್ರೀಡಾಂಗಣದಲ್ಲಿನ ನಡವಳಿಕೆ ಎಲ್ಲಾ ಕ್ರಿಕೆಟಿಗರಿಗೆ ಮಾದರಿ~ ಎಂದು ಕೆಲವರು ಸಂದೇಶ ಹರಿಬಿಟ್ಟಿದ್ದಾರೆ. `ನಿವೃತ್ತಿ ನಿರ್ಧಾರ ತಗೆದುಕೊಂಡಿದ್ದಕ್ಕೆ ಖುಷಿಯಾಗಿದೆ~ ಎಂದು ಇನ್ನೂ ಕೆಲವರು ಹೇಳಿದ್ದಾರೆ.ಕೆಲವರಂತೂ ಭಾರತ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿ ಬರಬೇಕು. ಆ ರೂಪದಲ್ಲಾದರೂ ರಾಹುಲ್ ಅವರನ್ನು ನೋಡುವ ಆಸೆ~ ಎಂದು ಕೂಡ ಕ್ರಿಕೆಟ್ ಪ್ರೇಮಿಗಳು ಆಶಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.