ಸಾಮಾಜಿಕ ನ್ಯಾಯಕ್ಕೆ ಚೂರಿ

7

ಸಾಮಾಜಿಕ ನ್ಯಾಯಕ್ಕೆ ಚೂರಿ

Published:
Updated:

ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿ­ಯಲ್ಲಿ ಬುಡಕಟ್ಟು ಹಾಗೂ ಹಿಂದುಳಿದ ವರ್ಗ­ಗಳ ಜನಸಮುದಾಯವೇ ಪ್ರಧಾನ­ವಾಗಿ­ರು­ವಾಗ, ಬುಡಕಟ್ಟು ಮಹಿಳೆಯೊಬ್ಬ­ರನ್ನು ದಾವಣಗೆರೆ ವಿ.ವಿ. ಕುಲಪತಿಯಾಗಿ ನೇಮಿ­ಸು­ವುದರಲ್ಲಿ ಅಡೆತಡೆಯಾದರೂ ಏನಿತ್ತು?ತಳಸಮುದಾಯಗಳ ಬಗ್ಗೆ ರಾಜ್ಯ­ಪಾಲರು ತೋರಿದ ನಿರ್ಲಕ್ಷ್ಯವನ್ನು ಅಪ­ಮಾನ­ವೆಂದೇ ಪರಿಗಣಿಸಬೇಕಾಗಿದೆ. ಇಲ್ಲಿ ಸಾಮಾ­ಜಿಕ ನ್ಯಾಯವನ್ನು ಗಾಳಿಗೆ ತೂರ­ಲಾಗಿದೆ. ಸಂವಿಧಾನವನ್ನು ಎತ್ತಿ ಹಿಡಿಯ­ಬೇಕಾದ ರಾಜ್ಯಪಾಲರೇ ಹಿಂಬಾಗಿಲುಗಳನ್ನು ಹುಟ್ಟು­ಹಾಕುವುದು ಯಾಕಾಗಿ? ಈ ಬಗ್ಗೆ ಸಾರ್ವ­ಜನಿಕವಾಗಿ ಚರ್ಚೆ ಆಗಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry