ಭಾನುವಾರ, ಏಪ್ರಿಲ್ 18, 2021
33 °C

ಸಾಮಾಜಿಕ ನ್ಯಾಯದಿಂದ ಸಂತೃಪ್ತಿ: ಅಜ್ಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ‘ಸಾಮಾಜಿಕ ನ್ಯಾಯದ ಮೂಲಕವೇ ದೇಶದ ಅಭಿವೃದ್ಧಿ ಮತ್ತು ಸಂತೃಪ್ತಿ ಸಾಧ್ಯ. ಒಂದು ವೇಳೆ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡದಿದ್ದರೆ ಕೇವಲ ಸರ್ಕಾರ ಮಾತ್ರ ಅಲ್ಲ, ಆ ದೇಶದ ಆಡಳಿತ ವ್ಯವಸ್ಥೆಯೂ ವಿಫಲವಾಗಿ ಅಶಾಂತಿಯನ್ನು ಹುಟ್ಟುಹಾಕುತ್ತದೆ’ ಎಂದು ರಾಜ್ಯ ಸಭೆಯ ಮಾಜಿ ಸದಸ್ಯ, ನವ ದೆಹಲಿಯ ಮೌಲಾನಾ ಉಬೇದುಲ್ಲಾ ಖಾನ್ ಅಜ್ಮಿ ಹೇಳಿದರು.ಪ್ರವಾದಿ ಮೊಹ್ಮದ್ ಪೈಗಂಬರರ ಜನ್ಮ ದಿನಾಚರಣೆ ಅಂಗವಾಗಿ ಅಲ್-ಹಾಸ್ಮಿ ಯುವ ಘಟಕದಿಂದ ಬುಧವಾರ ಸಂಜೆ ಇಲ್ಲಿಯ ದರಬಾರ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ  ‘ಮಿಲಾದ್ -ಎ-ಮುಸ್ತಫಾ’ ಸೌಹಾರ್ದ ಶಾಂತಿ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.1400 ವರ್ಷಗಳ ಹಿಂದೆ ಪ್ರವಾದಿ ಮೊಹ್ಮದ್ ಪೈಗಂಬರರು ಸಾಮಾಜಿಕ ನ್ಯಾಯದ ಬಗ್ಗೆ ಚಿಂತನೆ ನಡೆಸುವುದರ ಜೊತೆಗೆ ತಮ್ಮ ಕುಟುಂಬದಲ್ಲಿಯೇ ಅದನ್ನು ಜಾರಿಗೆ ತಂದಿದ್ದರು. ಸಾಮಾಜಿಕ ನ್ಯಾಯದಿಂದ ಮಾನವೀಯತೆ ಬೆಳೆಯುತ್ತದೆ ಎಂಬುದನ್ನು ಎಲ್ಲರಿಗೂ ತೋರ್ಪಡಿಸಿದ್ದರು. ಮಹಿಳಾ ಸಮಾನತೆ, ಅಕ್ಷರ ಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿದ್ದರು ಎಂದು ಹೇಳಿದರು.‘ಪ್ರಸಕ್ತ ಪರಿಸ್ಥಿತಿಯಲ್ಲಿ ಕೆಲ ಮಾಧ್ಯಮಗಳು ಮತ್ತು ಇಸ್ಲಾಂ ವಿರೋಧಿ ಶಕ್ತಿಗಳು ಮೊಹ್ಮದ್  ಪೈಗಂಬರರಿಗೆ ಅಪಮಾನ ಮಾಡುತ್ತಿವೆ’ ಎಂದು ವಿಷಾದಿಸಿದರು.

‘ಇಡೀ ಜಗತ್ತು ದೇವರ ಸೃಷ್ಟಿ. ಅದೊಂದು ಕುಟುಂಬ ಇದ್ದ ಹಾಗೆ. ಒಬ್ಬ ನಿರಪರಾಧಿಯನ್ನು ಕೊಲೆ ಮಾಡದರೆ ಇಡೀ ಮಾನವೀಯತೆಯನ್ನೇ ಕೊಂದಂತೆ. ಜಗತ್ತಿನಲ್ಲಿ ಈಗ ಸಾಕಷ್ಟು ಕ್ರಾಂತಿಗಳು ನಡೆಯುತ್ತಿದ್ದರೂ ಆ ದೇವರ ನಿರ್ಣಯವೇ ಅಂತಿಮವಾದುದು’ ಎಂದರು.ಅಲ್-ಹಾಸ್ಮಿ ಶಿಕ್ಷಣ ಕಲ್ಯಾಣ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಸೈಯದ್ ಮೊಹ್ಮದ್ ತನ್ವೀರ್ ಹಾಸ್ಮಿ ಮಾತನಾಡಿ, 10 ಜನ ಬಡ ಮಕ್ಕಳಿಗೆ ನೇತ್ರ ಶಸ್ತ್ರಚಿಕಿತ್ಸೆ ನೆರವೇರಿಸಲಾಗುವುದು ಎಂದರು.ಮೊಯಿನ್ ಪೀರಾ ಹಾಸ್ಮಿ ಅಧ್ಯಕ್ಷತೆ ವಹಿಸಿದ್ದರು. ಮೌಲಾನಾ ಮುಫ್ತಿ ಜೀಯಾವುದ್ದೀನ್ ನಕ್ಷಬಂದಿ, ನಿಜಾಮಿಯಾ ಹೈದ್ರಾಬಾದ್, ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ, ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ಮುಸ್ಲಿಂ ಧರ್ಮಗುರುಗಳು, ಇಂಡಿಕರ, ಮುಲ್ಲಾ, ಮೊಹ್ಸಿನ್ ಗೋಲೆವಾಲೆ, ಮುಸ್ತಫಾ ಜಹಗೀರದಾರ, ಹೈದರ್‌ಬಾಷಾ ಜಹಗೀರದಾರ, ಪೀರ್‌ಜಾದೆ, ಮೆಹಬೂಬ್ ಖಾದ್ರಿ ಮುಶ್ರಿಫ್, ಫಯಾಜ್ ಮುಶ್ರಿಫ್, ಶೇಖ ಮಾಸ್ತರ, ಎಂ.ಸಿ. ಮುಲ್ಲಾ, ರಿಯಾಜ್ ಫಾರೂಕಿ ಇತರರು ವೇದಿಕೆಯಲ್ಲಿದ್ದರು. ಎಸ್.ಎಂ. ಪಾಟೀಲ ಗಣಿಹಾರ ಮತ್ತಿತರರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.