ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವುದೇ ವ್ಯಂಗ್ಯ

7

ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವುದೇ ವ್ಯಂಗ್ಯ

Published:
Updated:

ಶಿವಮೊಗ್ಗ: ಕಲುಷಿತಗೊಂಡು ಪ್ರಸ್ತುತ ರಾಜಕಾರಣದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವುದೇ ವ್ಯಂಗ್ಯ ಎನಿಸಿದೆ ಎಂದು ಅಂಕಣಕಾರ ಟಿ.ಕೆ. ತ್ಯಾಗರಾಜ್ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ ಅಂಬೇಡ್ಕರ್ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ `ಸಾಮಾಜಿಕ ನ್ಯಾಯ ಮತ್ತು ಸಮಕಾಲೀನ ಬಿಕ್ಕಟ್ಟುಗಳು~ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.ಸಾಮಾಜಿಕ ನ್ಯಾಯ ಸಂವಿಧಾನದ ಆಶಯವಾಗಿರುವ ಶಿಕ್ಷಣದಂತಹ ಕ್ಷೇತ್ರದಲ್ಲಿ ಖಾಸಗೀಕರಣದ ಪ್ರಭಾವದಿಂದಾಗಿ ಶೋಷಿತ ಸಮುದಾಯಗಳನ್ನು ಶಿಕ್ಷಣ ಕ್ಷೇತ್ರದಿಂದ ವಂಚಿಸುವ ಕೆಲಸ ಗುಪ್ತಗಾಮಿನಿಯಾಗಿ ಸಾಗಿದೆ ಎಂದರು.ಸಾಮಾಜಿಕ ನ್ಯಾಯ ಎಲ್ಲರಿಗೂ ಧಕ್ಕಬೇಕಾದರೆ ಬ್ರಾಹ್ಮಣ್ಯ ಮುಕ್ತ ಸಮಾಜ ನಿರ್ಮಿಸಬೇಕಾದ ಅಗತ್ಯವಿದೆ ಎಂದರು.ಲೇಖಕ ಮಂಗ್ಳೂರು ವಿಜಯ, `ಸಾಮಾಜಿಕ ನ್ಯಾಯ ಮತ್ತು ಸರ್ಕಾರಿ ಬಜೆಟ್‌ಗಳು~ ಕುರಿತು ಮಾತನಾಡಿದ, ಸರ್ಕಾರ ಇದುವರೆಗೂ ಮಂಡಿಸಿರುವ ಬಜೆಟ್ ಸಾಮಾಜಿಕ ನ್ಯಾಯ ನಿವಾರಿಸುವಲ್ಲಿ ಸಫಲವಾಗಿದೆಯೇ ಎಂಬ ಪರಿಶೀಲನೆ ನಡೆಸಬೇಕಾದ ಅಗತ್ಯವಿದೆ ಎಂದರು.ವಿಚಾರಸಂಕಿರಣವನ್ನು ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ಬಿ.ಟಿ. ಮಂಜುನಾಥ ಉದ್ಘಾಟಿಸಿದರು.

ಒಕ್ಕೂಟದ ಸಂಚಾಲಕ ಡಾ.ಎಚ್. ಸೋಮಶೇಖರ್ ಶಿಮೊಗ್ಗಿ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದ ವಿವಿಧ ಗೋಷ್ಠಿಗಳಲ್ಲಿ ಪ್ರೊ.ಎಂ.ಬಿ. ನಟರಾಜ್, ಪ್ರೊ.ಎಂ. ಚಂದ್ರಶೇಖರಯ್ಯ, ಎನ್. ಶಿವಾನಂದ ಕುಗ್ವೆ, ರಾಜಪ್ಪ ಮಾಸ್ತರ್, ಪ್ರೊ.ಎಚ್. ರಾಚಪ್ಪ, ಡಾ.ಮಾರುತಿ, ಜಿ. ಚಂದ್ರಪ್ಪ ಮತ್ತಿತರರು ಪ್ರಬಂಧ ಮಂಡಿಸಿದರು.ಕಾರ್ಯಕ್ರಮದಲ್ಲಿ ಡಾ.ರವಿ ಭದ್ರಾವತಿ ಸ್ವಾಗತಿಸಿದರು. ಎಚ್. ದೊಡ್ಡನಾಯ್ಕ ವಂದಿಸಿದರು. ಡಾ.ರವಿನಾಯ್ಕ ಮತ್ತು ಡಾ.ಎಚ್.ಆರ್. ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry