ಸಾಮಾಜಿಕ ನ್ಯಾಯ ಕೊಟ್ಟ ಅಂಬೇಡ್ಕರ್

7

ಸಾಮಾಜಿಕ ನ್ಯಾಯ ಕೊಟ್ಟ ಅಂಬೇಡ್ಕರ್

Published:
Updated:

ಗುಲ್ಬರ್ಗ: ಭಾರತದಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟಿಸಿ ಸಾಮಾಜಿಕ ನ್ಯಾಯ ಕಲ್ಪಿಸಿ ಕೊಟ್ಟಿ ಸಂವಿಧಾನ ಬದ್ಧ ಹಕ್ಕುಗಳನ್ನು ನೀಡದವರು ಡಾ. ಬಿ. ಆರ್.ಅಂಬೇಡ್ಕರ್ ಎಂದು ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಹೇಳಿದರು.ಡಾ. ಅಂಬೇಡ್ಕರ್ ಹೋರಾಟ ಸಮಿತಿ(ರಿ) ಜಿಲ್ಲಾ ಘಟಕದ ವತಿಯಿಂದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ ಅವರು 56ನೇ ಮಹಾ ಪರಿನಿರ್ವಾಣ  ದಿನ ಸಮಾರಂಭದಲ್ಲಿ ಮಾತನಾಡಿದರು.ಪ್ರೊ. ಎಸ್.ಎ. ಪಾಳೇಕರ ಮಾತನಾಡಿ, ಭಾರತದೇಶಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ನೀಡಿದ ಅಂಬೇಡ್ಕರ ಶೋಷಿತರನ್ನು ಮೇಲೆತ್ತುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಎಸ್.ಜಿ. ಭಾರತಿ, ಅಶ್ವಿನಿ ಸಂಗೋಳಗಿ, ಸುರೇಶ ಹೋಳಕರ, ಸಿದ್ದಾರ್ಥ ಬಬಲಾದ, ಹರ್ಷವರ್ಧನ ಬಡಿಗೇರ ಮತ್ತಿತರರು ಇದ್ದರು.  ಶರಣು ಕಟ್ಟಿ ನಿರೂಪಿಸಿದರು. ಕಮಲಾಕ್ಷೀ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry