ಸೋಮವಾರ, ಮೇ 17, 2021
28 °C

ಸಾಮಾಜಿಕ ಬದ್ಧತೆಯುಳ್ಳ ಪತ್ರಿಕೆ ಪ್ರಜಾವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಇಂದಿನ ತೀವ್ರ ಸ್ಪರ್ಧಾತ್ಮಕ ದಿನಗಳಲ್ಲೂ `ಪ್ರಜಾವಾಣಿ~ ಪತ್ರಿಕೆ ಸಾಮಾಜಿಕ ಬದ್ಧತೆ ಉಳಿಸಿಕೊಂಡು ಬರುತ್ತಿದೆ. ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ವೇದಿಕೆ  ಸೃಷ್ಟಿಸಿ ಕೊಟ್ಟ ಕೀರ್ತಿ ಪತ್ರಿಕೆಗೆ ಸಲ್ಲಬೇಕು ಎಂದು `ಪ್ರಜಾವಾಣಿ~ ಸುದ್ದಿ ಸಂಪಾದಕ ಗಂಗಾಧರ್ ಮೊದಲಿಯಾರ್ ಹೇಳಿದರು.ಕೊಡಗು ಜಿಲ್ಲಾ ಪತ್ರಕರ್ತರ ಸಂಘವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಅವರು  ಮಾತನಾಡಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ `ಸಮಾನತೆ ಕನಸನ್ನು ಮತ್ತೆ ಕಾಣುತ್ತ...~ ಎನ್ನುವ  ವಿಶೇಷ ಸಂಚಿಕೆಯನ್ನು `ಪ್ರಜಾವಾಣಿ~ ಪ್ರಕಟಿಸಿತ್ತು. ಇದಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಇಂತಹ ಕೆಲಸವನ್ನು `ಪ್ರಜಾವಾಣಿ~ ಬಿಟ್ಟರೆ ಬೇರಾವ  ಪತ್ರಿಕೆಯವರೂ ಮಾಡಲು ಸಾಧ್ಯವಿಲ್ಲ ಎಂದರು.ಪ್ರಶಂಸೆ: ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಅಂಬೇಡ್ಕರ್ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಎಚ್.ಎಂ. ಕಾವೇರಿ ಕೂಡ `ಪ್ರಜಾವಾಣಿ~ಯ ಈ ವಿಶೇಷ ಸಂಚಿಕೆಯನ್ನು ಪ್ರಶಂಶಿಸಿದರು.ದಲಿತರನ್ನು ಕೇಂದ್ರೀಕರಿಸಿಕೊಂಡು ಹೊರಬಂದಿರುವ ಈ ಪತ್ರಿಕೆಯನ್ನು ಖರೀದಿಸಿ, ಓದಿರಿ ಎಂದು ಅವರು ಸಭೆಯಲ್ಲಿ ಸೇರಿದ ಜನಸ್ತೋಮಕ್ಕೆ ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.