ಶನಿವಾರ, ಜೂನ್ 12, 2021
23 °C

ಸಾಮಾಜಿಕ ಬೆಳವಣಿಗೆಗೆ ತಂತ್ರಜ್ಞಾನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಸಾಮಾಜಿಕ ಬೆಳವಣಿಗೆಗೆ ತಂತ್ರಜ್ಞಾನ ಹಾಗೂ ವ್ಯವಹಾರ ಜ್ಞಾನ ಅಗತ್ಯವಾಗಿದೆ ಎಂದು ಬೆಂಗಳೂರಿನ ನೋಕ್ಸ್ ಇನ್ನೋವೇಶನ್ ಸಿಇಓ ಭೀಮಸೇನ್ ಜಿ. ವಿ. ಹೇಳಿದರು.ನಗರದ ಕೆಎಲ್‌ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾ ವಿದ್ಯಾಯಲದ ಬಿಸಿಎ ಮತ್ತು ಬಿಬಿಎ ವಿಭಾಗದ ವತಿಯಿಂದ ಭಾನುವಾರ ಏರ್ಪಡಿಸಿದ್ದ ತಂತ್ರಜ್ಞಾನ ಹಾಗೂ ವ್ಯವಹಾರಿಕ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಬ್ಬ ವಿದ್ಯಾರ್ಥಿಗಳು ಆಸಕ್ತಿ ವಹಿಸಿ ತಂತ್ರಜ್ಞಾನ ಹಾಗೂ ವ್ಯವ ಹಾರದ ಅಧ್ಯಯನ ನಡೆಸುವ ಮೂಲಕ ತಮ್ಮಲ್ಲಿರುವ ಪ್ರತಿಭೆಗಳನ್ನು ವೇದಿಕೆಗಳ ಮೂಲಕ ಹಂಚಿಕೊಂಡು ಸಮಾಜದ ಬೆಳವಣಿಗೆಗೆ ಸಹಕರಿಸಿ ಎಂದರು.ಪ್ರಸ್ತುತ ದಿನಮಾನಗಳಲ್ಲಿ ತಂತ್ರ ಜ್ಞಾನ ಹಾಗೂ ವ್ಯವಹಾರ ಕ್ಷೇತ್ರಗಳು ವಿಶಾಲವಾಗಿ ವ್ಯಾಪಿಸಿವೆ. ವಿದ್ಯಾರ್ಥಿ ಗಳಿಗೆ ಸಾಕಷ್ಟು ಅವಕಾಶ ಗಳನ್ನು ಕಲ್ಪಿಸಿವೆ. ಇದರ ಸದುಪಯೋಗ ಪಡೆದು ಕೊಳ್ಳಲು ವಿದ್ಯಾರ್ಥಿಗಳು ಸತತ ಪ್ರಯತ್ನ ನಡೆಸ ಬೇಕು ಎಂದು ಹೇಳಿದರು.ಈ ಎರಡು ಕ್ಷೇತ್ರಗಳಲ್ಲಿ ಸಾಧನೆ ಮಾಡುವುದರಿಂದ ದೇಶದ ತಂತ್ರಜ್ಞಾನ ಹಾಗೂ ವ್ಯವಹಾರ ಮತ್ತೋಷ್ಟು ಬಲಗೊಳ್ಳಲಿದೆ. ಇನ್ನು ಅನೇಕರಿಗೆ ಅವಕಾಶಗಳನ್ನು ಕಲ್ಪಿಸಲಿವೆ ಎಂದು ಅಭಿಪ್ರಾಯಪಟ್ಟರು.ಎಸ್.ಆರ್. ಇನ್ಫೋಟೆಕ್ ಸಿಇಓ ಸಚಿನ್ ಪಾಟೀಲ ಮಾತನಾಡಿ, ವಿಶಾಲ ವಾಗಿ ಬೆಳೆದಿರುವ ತಂತ್ರಜ್ಞಾನ ಕ್ಷೇತ್ರ ದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿ ಗಳ ಸಾಧನೆ ಹೆಚ್ಚಿದೆ ಎಂದರು.ಪ್ರಾಚಾರ್ಯ ಎಂ.ಬಿ. ಚನ್ನಪ್ಪಗೌಡರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಸದಸ್ಯ ಈಶಣ್ಣ ಮುನವಳ್ಳಿ, ವಿದ್ಯಾರ್ಥಿ ಪ್ರತಿನಿಧಿ ರಾಧಿಕಾ ಮತ್ತಿತರರು ಹಾಜರಿದ್ದರು.ಪೂಜಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಎಸ್.ಎಸ್. ಗುರುಬಸನಗೌಡರ ಸ್ವಾಗತಿಸಿದರು.

 ಜಿ. ಶೋಭಾ ಹಾಗೂ ಎಂ. ನಿಶ್ಚಿತಾ ಅತಿಥಿಗಳನ್ನು ಪರಿಚಯಿಸಿದರು. ವೀರೇಶ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.