ಸಾಮಾಜಿಕ ಸಾಮರಸ್ಯವೇ ಕನಕದಾಸರ ಆಶಯ

7

ಸಾಮಾಜಿಕ ಸಾಮರಸ್ಯವೇ ಕನಕದಾಸರ ಆಶಯ

Published:
Updated:
ಸಾಮಾಜಿಕ ಸಾಮರಸ್ಯವೇ ಕನಕದಾಸರ ಆಶಯ

ಪರಶುರಾಂಪುರ: ಎಲ್ಲಾ ವರ್ಗದ ಜನರು ಪರಸ್ಪರ ಪ್ರೀತಿ, ಸಹಕಾರದಿಂದ ಬದುಕಿ ಎಂದು ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಹೇಳಿದ್ದಾರೆ. ಅವರ ಆದರ್ಶ ಪಾಲನೆ ಅಗತ್ಯ ಎಂದು ಕಾಗಿನೆಲೆ ಗುರುಪೀಠ ತಿಂಥಿಣಿ ಶಾಖಾ ಮಠದ ಸಿದ್ದರಾಮಾನಂದ ಪುರಿ ಸ್ವಾಮೀಜಿ ನುಡಿದರು.ಸಮೀಪದ ಕಲಮರಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ `ಕನಕ ಜಯಂತ್ಯುತ್ಸವ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇದೇ ಗ್ರಾಮದಲ್ಲಿ ಕಳೆದ ಬಾಲ್ಯದ ಕೆಲವು ಘಟನೆಗಳನ್ನು ಮೆಲುಕುಹಾಕಿ, ಹಳ್ಳಿಗಳಲ್ಲಿ ಇಂದಿಗೂ ವಿವಿಧ ಮತ, ಧರ್ಮಚರಣೆಯ ಜನರು ಒಗ್ಗಟ್ಟಿನಿಂದ ಬಾಳುತ್ತಿದ್ದಾರೆ. ಪ್ರತಿಯೊಬ್ಬರೂ ಮಕ್ಕಳಿಗೆ ವಿದ್ಯೆ ಮತ್ತು ಸಂಸ್ಕಾರ ಕೊಡುವುದರ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಲು ಅವಕಾಶ ಮಾಡಿಕೊಡಿ ಎಂದರು.ಕನಕದಾಸರ ಬದುಕು-ಬರಹ ಕುರಿತು ಪ್ರೊ.ಎಂ. ಶಿವಲಿಂಗಪ್ಪ ಮಾತನಾಡಿ, ಬದುಕಿನ ಎಲ್ಲಾ ಸ್ಥರಗಳ ಅನುಭವವನ್ನು ಕಂಡ ಕನಕದಾಸರು ಕೀರ್ತನೆಗಳನ್ನು ರಚಿಸಿ, ಜನಸಾಮಾನ್ಯರ ಭಾಷೆಯಲ್ಲಿ ಹಾಡುವ ಮುಖೇನ ಎಲ್ಲರ ಮನೆಮಾತಾಗಿದ್ದರು. ತನ್ನದೆಲ್ಲವನ್ನು ತ್ಯಾಗ ಮಾಡಿ, ಸಮಾಜದ ಒಳಿತಿಗಾಗಿ ಶ್ರಮಿಸಿದ ವ್ಯಕ್ತಿಗಳು ಮಾತ್ರ ಪೂಜ್ಯಾರ್ಹರು. ಅಂತಹವರ ಸಾಲಿನಲ್ಲಿ ಕನಕದಾಸರು ಪ್ರಮುಖರು ಎಂದರು.ಮುರುಘಾ ಮಠದ ಬಸವರಮಾನಂದ ಸ್ವಾಮೀಜಿ, ಎನ್. ಪ್ರಕಾಶ್ ಒಡೆಯರ್, ಕೆ.ಟಿ. ಕುಮಾರಸ್ವಾಮಿ, ಕಂದೀಕೆರೆ ಸುರೇಶ್‌ಬಾಬು, ಜಯರಾಂ, ಮಾತನಾಡಿದರು. ಜಾನಪದ ರಾಜ್ಯ ಪ್ರಶಸ್ತಿ ಪುರಸ್ಕೃತ ಈರಬಡಪ್ಪ ಅಧ್ಯಕ್ಷತೆ ವಹಿಸಿದ್ದರು.ಆರ್. ಮಲ್ಲೇಶಪ್ಪ, ಓದೀರಪ್ಪ, ಕೆ. ಮಲ್ಲಿಕಾರ್ಜುನ, ಎಲ್. ಲೋಕೇಶ್, ಚಂದ್ರಶೇಖರ್, ಸೂರನಹಳ್ಳಿ ಜಗದೀಶ್, ಜಯರಾಮಪ್ಪ, ಚಂದ್ರಮ್ಮ, ಪಾಂಡುರಂಗಪ್ಪ, ನಾಗರಾಜ್, ಮಹಸ್ವಾಮಿ, ಪೂಜಾರ್ ಮಲ್ಲಿಕಾರ್ಜುನ ಇತರರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry