ಬುಧವಾರ, ಮೇ 12, 2021
18 °C

ಸಾಮಾನ್ಯನನ್ನು ವರಿಸಲಿರುವ ರಾಜಕುವರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಟಾಕ್‌ಹೋಮ್ (ಐಎಎನ್‌ಎಸ್): ರಾಜಕುಮಾರಿ ಅಥವಾ ರಾಜಕುಮಾರನಿಗೆ ಆಕಸ್ಮಿಕವಾಗಿ ಬಡ ಕುಟುಂಬದ ಯುವಕ/ಯುವತಿಯೊಂದಿಗಿನ ಪ್ರೇಮಾಂಕುರವಾಗಿ ವಿವಾಹದಲ್ಲಿ ಸುಖಾಂತ್ಯಗೊಳ್ಳುವ ಕಥೆಯನ್ನು ಸಾಮಾನ್ಯವಾಗಿ ಚಿಕ್ಕಂದಿನಲ್ಲಿ ಎಲ್ಲರೂ ಕೇಳಿರುತ್ತಾರೆ. ಆದರೆ, ಈ ಕಾಲ್ಪನಿಕ ಕಥೆಗಳನ್ನು ಹೋಲುವ ನೈಜ ಘಟನೆಯೊಂದು ಶನಿವಾರ ಸ್ವೀಡನ್‌ನಲ್ಲಿ ನಡೆಯಲಿದೆ. ಈ  ಐತಿಹಾಸಿಕ ಘಟನೆಗಾಗಿ ಇಡೀ ಸ್ವೀಡನ್ ಸಂಭ್ರಮದಿಂದ ಕಾಯುತ್ತಿದೆ.ಸ್ವೀಡನ್‌ನ ಬರ್ನಾಡೋಟ್ ರಾಜಮನೆತನದ ರಾಜಕುಮಾರಿ ಮೆಡಲಿನ್ ತೆರೆಸಾ ಅಮೆಲಿ ಜೋಸೆಫಿನ್ ಬರ್ನಾಡೋಟ್ ಶನಿವಾರ ಜನಸಾಮಾನ್ಯ ಯುವಕನೊಬ್ಬನನ್ನು ವರಿಸಲಿದ್ದಾಳೆ. ಅಮೆರಿಕದ ಪ್ರತಿಷ್ಠಿತ ವಾಣಿಜ್ಯ ಕಾಲೇಜೊಂದರಿಂದ ಪದವಿ ಪಡೆದಿರುವ ಸ್ವೀಡನ್ ಮತ್ತು ಬ್ರಿಟನ್ ದಂಪತಿಗೆ ಜನಿಸಿದ ಕ್ರಿಸ್ಟೋಫರ್ ಒ'ನೀಲ್ ಎಂಬ ಸಾಮಾನ್ಯ ಕುಟುಂಬದ ಯುವಕನೊಂದಿಗೆ ಆಕೆ ಉಂಗುರ ಬದಲಿಸಿಕೊಳ್ಳಲಿದ್ದಾಳೆ. ಸ್ಟಾಕ್‌ಹೋಮ್ ಹಳೆಯ ಭಾಗದಲ್ಲಿರುವ ರಾಯಲ್ ಚರ್ಚ್‌ನಲ್ಲಿ ನಡೆಯಲಿರುವ ಈ ಅಭೂತಪೂರ್ವ ಕ್ಷಣಗಳಿಗೆ ಐರೋಪ್ಯ ಒಕ್ಕೂಟದ ರಾಜಮನೆತನಗಳ ನೂರಾರು ಸದಸ್ಯರು, ಗಣ್ಯರು ಸಾಕ್ಷಿಯಾಗಲಿದ್ದಾರೆ.ಮಹಾರಾಜ 16ನೇ ಕಾರ್ಲ್ ಗುಸ್ತಾವ್ ಮತ್ತು ಮಹಾರಾಣಿ ಸಿಲ್ವಿಯಾ ಮುದ್ದಿನ ಕುವರಿಯಾದ ಮೆಡಲಿನ್ ವೈಭವೋಪೇತ ಮದುವೆಗೆ ಯುರೋಪ್ ಸೇರಿದಂತೆ ಜಗತ್ತಿನ ವಿವಿಧೆಡೆಯ 1,200 ಜನ ರಾಜಮನೆತನದ ಸದಸ್ಯರು ಸಾಕ್ಷಿಯಾಗಲಿದ್ದಾರೆ.ಅನೇಕ ವರ್ಷಗಳ ನಂತರ ಇಷ್ಟೊಂದು ಸಂಖ್ಯೆಯ ರಾಜಕುಟುಂಬದ ಸದಸ್ಯರು ಒಂದೆಡೆ ಸೇರಲಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ. ಭಾರತದ ಪರ ರಾಯಭಾರಿ ಬಾಲಕೃಷ್ಣ ಶೆಟ್ಟಿ ಈ ಸಮಾರಂಭಕ್ಕೆ ಹಾಜರಿ ಹಾಕಲಿದ್ದಾರೆ.ನ್ಯೂಯಾರ್ಕ್‌ನಲ್ಲಿರುವ 31 ವರ್ಷದ ಮೆಡಲಿನ್ ತನ್ನ ತಾಯಿ ಸ್ಥಾಪಿಸಿರುವ ಸ್ವಯಂಸೇವಾ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದಾಳೆ. ಈ ಮೊದಲು ಬೇರೊಬ್ಬ ಯುವಕನೊಂದಿಗೆ ರಾಜಕುಮಾರಿಯ ನಿಶ್ಚಿತಾರ್ಥವಾಗಿದ್ದು, ಅದು ಮುರಿದು ಬಿದ್ದಿತ್ತು. ಈ ಅದ್ದೂರಿ ಮದುವೆಯ ಬಗ್ಗೆ ಕೆಲವು ಆಕ್ಷೇಪ ಕೇಳಿಬಂದಿದ್ದು, ಮದುವೆಯ ಸಂಭ್ರಮಕ್ಕೆ ಅಡ್ಡಿಯಾಗಲಾರದು ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.