ಭಾನುವಾರ, ಮೇ 9, 2021
27 °C

ಸಾಮಾನ್ಯರಿಗೆ ನೆರವಾದ ಉಚಿತ ಚಿಕಿತ್ಸೆ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಡಂ: ಇತ್ತೀಚಿನ ವರ್ಷಗಳಿಂದ ಉಚಿತ ಆರೋಗ್ಯ ಶಿಬಿರಗಳು ಜನಸಾಮಾನ್ಯರಿಗೆ ನೆರವಾಗಿ, ಅವರ ಸಮಸ್ಯೆಗೆ ಸ್ಪಂದಿಸುವಲ್ಲಿ ಪ್ರಾಮಾಣಿಕ ಹೆಜ್ಜೆ ಇಟ್ಟಿವೆ ಎಂದು ವಾಸವದತ್ತಾ ಸಿಮೆಂಟ್ ಕಂಪೆನಿಯ ಉಪಾಧ್ಯಕ್ಷ ಹಾಗೂ ವಿದ್ಯುತ್ ವಿಭಾಗದ ಮುಖ್ಯಸ್ಥ ಪಿ.ವಿ.ಎನ್. ಮಲ್ಲೇಶ್ವರರಾವ ಅವರು ಅಭಿಪ್ರಾಯಪಟ್ಟರು.ಲಯನ್ಸ್ ಕ್ಲಬ್, ವಾಸವದತ್ತಾ ಗ್ರಾಮೀಣ ಅಭಿವೃದ್ಧಿ ಕೇಂದ್ರ, ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರ, ಆರೋಗ್ಯ ಇಲಾಖೆ ಮತ್ತು ಸೇಡಂ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಜಂಟಿಯಾಗಿ ಈಚೆಗೆ ಇಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದ ಮುಕ್ತಾಯ ಸಮಾರಂಭದಲ್ಲಿ, ನೇತ್ರ ಚಿಕಿತ್ಸೆಗೆ ಒಳಗಾದ  ಫಲಾನುಭವಿ ರೋಗಿಗಳಿಗೆ ಉಚಿತ ಕನ್ನಡಕಗಳನ್ನು ವಿತರಿಸಿ ಅವರು ಮಾತನಾಡಿದರು.ವೈದ್ಯಾಧಿಕಾರಿ ಡಾ. ಗೀತಾ ರೆಡ್ಡಿ ಚಿಕಿತ್ಸೆಗೆ ಒಳಗಾದವರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರ ಒದಸಿದರು. ಕ್ಲಬ್ ಅಧ್ಯಕ್ಷ ಮತ್ತು ಕಂಪೆನಿ ಹಿರಿಯ ಅಧಿಕಾರಿ ಸುನೀಲಕುಮಾರ ಅವರು ಕ್ಲಬ್‌ನ ಚಟುವಟಿಕೆಗಳನ್ನು ತಿಳಿಸಿದರು.ಕೇಂದ್ರದ ಮುಖ್ಯಸ್ಥ ಜೆ. ವಿದ್ಯಾಸಾಗರರಾವ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಅಶ್ವತ್ಥನಾರಾಯಣ ನಿರೂಪಿಸಿ ವಂದಿಸಿದರು. ಶಿಬಿರದಲ್ಲಿ 100ಕ್ಕೂ ಹೆಚ್ಚು ರೋಗಿಗಳ ತಪಾಸಣೆ ಮಾಡಿ ಅರ್ಹ ಹತ್ತು ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.