ಮಂಗಳವಾರ, ಜೂನ್ 22, 2021
27 °C

ಸಾಮಾನ್ಯ ಫೋನಿನಲ್ಲೇ ಮಾಹಿತಿ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಮಾರ್ಟ್ ಫೋನ್‌ನ ಅವ­ಶ್ಯಕತೆ­ಯಿಲ್ಲದೆ ಸಾಧಾರಣ ಫೋನಿ­ನಲ್ಲೇ ಮಾಹಿತಿ ಒದಗಿಸುವ ‘ಟೆಕ್ಸ್ಟ್‌ ವೆಬ್’ ಸೇವೆಗೆ ‘ಇನ್‌ಟ್ಯೂಟ್ ಇಂಕ್’ ಸಂಸ್ಥೆ ಬುಧ­ವಾರ ಚಾಲನೆ ನೀಡಿತು.ಮಾಹಿತಿಗೆ 5115ಕ್ಕೆ ಎಸ್ಸೆಮ್ಮೆಸ್ ಕಳುಹಿಸುವ ಮೂಲಕ ಮಾಹಿತಿ ಪಡೆ­­ಯ­ಬಹುದು ಎಂದು ಸಂಸ್ಥೆಯ ಮಾರು­ಕಟ್ಟೆ ವಿಭಾ­­ಗದ ಮುಖ್ಯಸ್ಥೆ ವಿದ್ಯಾರಾಮನಾಥನ್ ಹೇಳಿ­ದರು. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಪದವಿ ಪೂರ್ಣ ಶಿಕ್ಷಣ ಮಂಡಳಿ ಹಾಗೂ ವಿವಿಧ ವೃತ್ತಿಶಿಕ್ಷಣ ಪರೀಕ್ಷೆ­­­ಗಳಿಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆಗಳು ಲಭ್ಯ­ವಿದೆ. ಇದ­­ರಿಂದ ಅಂತರ್ಜಾಲ ಲಭ್ಯ­ವಿಲ್ಲದ ಗ್ರಾಮೀಣ ಪ್ರದೇಶ­­ದವ­ರಿಗೆ ಹೆಚ್ಚು ಉಪಯೋಗವಾಗಲಿದೆ. ಪ್ರತಿ ಎಸ್ಸೆಮ್ಮೆಸ್‌ಗೆ 50 ಪೈಸೆ ಪಾವತಿಸಬೇಕಾಗುತ್ತದೆ ಎಂದರು.ಪದವಿಪೂರ್ವ ಶಿಕ್ಷಣ ಮಂಡಳಿಯ ಬಗೆಗಿನ ಮಾಹಿತಿ ಮತ್ತು ಪ್ರಶ್ನೆಪತ್ರಿಕೆ­ಗಳಿ­ಗಾಗಿ @12board ಎಂದು ಎಸ್ಸೆಮ್ಮೆಸ್ ಕಳುಹಿಸುವ ಮೂಲಕ ಮಾಹಿತಿ ಪಡೆದು­ಕೊಳ್ಳ­ಬಹುದು ಎಂದು ಅವರು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.