ಗುರುವಾರ , ಜೂನ್ 17, 2021
22 °C

ಸಾಮಾನ್ಯ ವಿಮೆ ಉದ್ಯಮ ಶೇ 19 ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ದೇಶದ ಸಾಮಾನ್ಯ ವಿಮಾ ಉದ್ಯಮ ಕ್ಷೇತ್ರ ಜನ ವರಿಯಲ್ಲಿ ಪ್ರೀಮಿಯಂ ಸಂಗ್ರಹದಲ್ಲಿ ಉತ್ತಮ ಬೆಳವಣಿಗೆ ಕಂಡಿದೆ. ಒಟ್ಟು ₨7,380.72 ಕೋಟಿಗಳಷ್ಟು ಪ್ರೀಮಿಯಂ ಸಂಗ್ರಹವಾಗಿದೆ.ದೇಶದಲ್ಲಿ ಸಾಮಾನ್ಯ ವಿಮಾ ಕ್ಷೇತ್ರ ದಲ್ಲಿ ಸದ್ಯ 27 ಕಂಪೆನಿಗಳಿವೆ. ಇದರಲ್ಲಿ ಕೇಂದ್ರ ಸರ್ಕಾರದ ಒಡೆತನಕ್ಕೆ ಸೇರಿದ ನಾಲ್ಕು ಪ್ರಮುಖ ವಿಮಾ ಕಂಪೆನಿಗಳದ್ದೇ ಶೇ 56ರಷ್ಟು ದೊಡ್ಡ ಮಾರುಕಟ್ಟೆ ಪಾಲು ಇದೆ. ‘ನ್ಯಾಷನಲ್‌ ಇನ್ಷೂರೆನ್ಸ್‌’, ನ್ಯೂ ಇಂಡಿಯಾ ಅಶ್ಯೂರೆನ್ಸ್‌, ‘ಓರಿಯಂಟಲ್‌ ಇನ್ಷೂರೆನ್ಸ್‌’ ಮತ್ತು ಯುನೈಟೆಡ್‌ ಇಂಡಿಯಾ ಇನ್ಷೂರೆನ್ಸ್‌ ಜನವರಿಯಲ್ಲಿ ಒಟ್ಟು ₨4,106.23 ಕೋಟಿ ಪ್ರೀಮಿಯಂ ಸಂಗ್ರಹಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.