ಸಾಮೂಹಿಕ ಅತ್ಯಾಚಾರ: ಕ್ಷಮೆ ಕೋರಿದ ದೆಹಲಿ ಪೊಲೀಸರು.

7

ಸಾಮೂಹಿಕ ಅತ್ಯಾಚಾರ: ಕ್ಷಮೆ ಕೋರಿದ ದೆಹಲಿ ಪೊಲೀಸರು.

Published:
Updated:
ಸಾಮೂಹಿಕ ಅತ್ಯಾಚಾರ: ಕ್ಷಮೆ ಕೋರಿದ ದೆಹಲಿ ಪೊಲೀಸರು.

ನವದೆಹಲಿ (ಪಿಟಿಐ): ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ `ಅಸಮರ್ಪಕ ವರದಿ' ಸಲ್ಲಿಸಿದ ಬಳಿಕ ಕ್ಷಮೆ ಕೋರಿದ ಘಟನೆ ಗುರುವಾರ ನಡೆದಿದೆ.ಈಗಾಗಲೇ ಸಾರ್ವಜನಿಕ ಟೀಕೆಗೆ ಗುರಿಯಾಗಿರುವ ದೆಹಲಿ ಪೊಲೀಸರು `ಅತ್ಯಾಚಾರ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವಸ್ತುಸ್ಥಿತಿ ವರದಿಯಲ್ಲಿ ಲೋಪದೋಷಗಳಿರುವುದನ್ನು ಒಪ್ಪಿಕೊಂಡು ನ್ಯಾಯಾಲಯದ ಕ್ಷಮೆ ಕೋರಿದ್ದಾರೆ.ಘಟನೆ ನಡೆದಾಗ ಪಿಸಿಆರ್ ವ್ಯಾನ್‌ನಲ್ಲಿದ್ದ ಪೊಲೀಸರ ಹೆಸರನ್ನು ವರದಿಯಲ್ಲಿ ನಮೂದಿಸದೇ ಇರುವುದು ನ್ಯಾಯಧೀಶರ ಅಸಮಾಧಾನಕ್ಕೆ ಕಾರಣವಾಗಿತ್ತು.ಲೋಪದೋಷಗಳನ್ನು ಸರಿಪಡಿಸಿ ಶೀಘ್ರದಲ್ಲೇ ವಸ್ತುಸ್ಥಿತಿ ವರದಿಯನ್ನು ನ್ಯಾಯಾಲಕ್ಕೆ ಸಲ್ಲಿಸುವುದಾಗಿ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry