ಸಾಮೂಹಿಕ ಅತ್ಯಾಚಾರ ನಡೆಸಿ ಆಭರಣ ಲೂಟಿ

7

ಸಾಮೂಹಿಕ ಅತ್ಯಾಚಾರ ನಡೆಸಿ ಆಭರಣ ಲೂಟಿ

Published:
Updated:

ಜಾಜ್‌ಪುರ (ಒಡಿಶಾ)(ಪಿಟಿಐ): ಒಡಿಶಾದ ಕಿಯೊಂಜಾರ್ ಜಿಲ್ಲೆಯಲ್ಲಿ ಮೂವರು ಯುವಕರು 24 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ಆಭರಣಗಳನ್ನು ಲೂಟಿ ಮಾಡಿದ ಘಟನೆ ನಡೆದಿದೆ.ಕಟಕ್‌ನ ಈ ವಿವಾಹಿತ ಮಹಿಳೆ ಜಾಜ್‌ಪುರ ಜಿಲ್ಲೆಯಲ್ಲಿರುವ ತನ್ನ ಸಹೋದರಿಯ ಮನೆಗೆ ತೆರಳಿದ್ದಳು. ವಾಪಸು ಬಸ್‌ಗಾಗಿ ಕಾಯುತ್ತಿದ್ದಾಗ ಆರೋಪಿಗಳಲ್ಲಿ ಒಬ್ಬನಾದ ಸುಭಾ ಅಲಿಯಾಸ್ ಪಾಪು `ಎಸ್‌ಯುವಿ'ಯಲ್ಲಿ ಆಕೆಯನ್ನು ಬಿಡುವುದಾಗಿ ಹೇಳಿದ.

ಪಕ್ಕದ  ಕಿಯೊಂಜಾರ್ ಜಿಲ್ಲೆಯ ಘಟಗಾಂವ್ ಅರಣ್ಯ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದ ಪಾಪು ತನ್ನ ಸ್ನೇಹಿತರಾದ ಮನಸ್ ದಾಸ್ ಮತ್ತು ಸುಜಿತ್ ಘಡೆಯ್ ಜತೆ ಸೇರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ.ಆಕೆಗೆ ಪ್ರಜ್ಞೆ ತಪ್ಪಿದಾಗ ಆ ಗುಂಪು ಆಕೆಯ ಆಭರಣ ಹಾಗೂ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಯಿತು. ಪ್ರಜ್ಞೆ ಮರಳಿದ ಮೇಲೆ ಆಕೆ ದೂರು ದಾಖಲಿಸಿದ್ದಾಳೆ. ಆರೋಪಿಗಳನ್ನು ಬಂಧಿಸಲಾಗಿದ್ದು, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry