ಸಾಮೂಹಿಕ ಅತ್ಯಾಚಾರ; ನಾಲ್ವರ ವಿಚಾರಣೆ

7

ಸಾಮೂಹಿಕ ಅತ್ಯಾಚಾರ; ನಾಲ್ವರ ವಿಚಾರಣೆ

Published:
Updated:

ರಾಮನಗರ: ಬೆಂಗಳೂರು ಹೊರವಲಯದ ಮರಿಯಪ್ಪನಪಾಳ್ಯ ಸಮೀಪ ಮೂವರು `ಬಾರ್ ಗರ್ಲ್ಸ್~ಗಳ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ನಾಲ್ವರು ಶಂಕಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.`ಬಾರ್ ಗರ್ಲ್ಸ್~ಗಳು ನೀಡಿದ ಗುರುತುಗಳನ್ನು ಆಧರಿಸಿ ಆರೋಪಿಗಳ ಚಹರೆಯ ರೇಖಾಚಿತ್ರಗಳನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಎಲ್ಲ ಪೊಲೀಸ್ ಠಾಣೆಗಳಿಗೆ ನೀಡಿ, ತನಿಖೆ ತೀವ್ರಗೊಳಿಸಲಾಗಿದೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ವಿಶೇಷ ಪೊಲೀಸರನ್ನು ಮಫ್ತಿಯಲ್ಲಿ ಬಿಡಲಾಗಿದ್ದು, ಆರೋಪಿಗಳನ್ನು ಸೆರೆ ಹಿಡಿಯಲು ಯೋಜನೆ ರೂಪಿಸಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದ್ದು, ಘಟನೆಯನ್ನು ಪರಾಮರ್ಶಿಸಿದರೆ ಆರೋಪಿಗಳು ಮೊದಲ ಬಾರಿಗೆ ಅಪರಾಧ ಎಸಗಿರುವಂತೆ ಕಾಣುತ್ತಿದೆ. ಬಹುಶಃ ಸ್ಥಳೀಯರು ಈ ಕೃತ್ಯ ಎಸಗಿರಬಹುದು ಎಂಬ ಶಂಕೆಯೂ ಇದೆ ಎಂದು ಅವರು ಹೇಳಿದರು.ಆರೋಪಿಗಳ ಕಾರಿನ ಪತ್ತೆಗೆ ಆರ್‌ಟಿಒ ನೆರವು ಪಡೆಯಲಾಗಿದೆ. ಮರಿಯಪ್ಪನಪಾಳ್ಯ, ನಾಗದೇವನಹಳ್ಳಿಯಲ್ಲಿ ರಾತ್ರಿ ಗಸ್ತು ತೀವ್ರಗೊಳಿಸಲಾಗಿದ್ದು, ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. `ಬಾರ್ ಗರ್ಲ್ಸ್~ಗಳ ಮೊಬೈಲ್ ಕದ್ದಿರುವ ದುಷ್ಕರ್ಮಿಗಳ ಪತ್ತೆಗೆ ಸೈಬರ್‌ಪೊಲೀಸರ ನೆರವು ಪಡೆಯಲಾಗಿದೆ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ವರದಿ ಬಂದಿಲ್ಲ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry