ಸಾಮೂಹಿಕ ಅತ್ಯಾಚಾರ: ಪುತ್ರಿಯ ಹೆಸರು ಬಹಿರಂಗ- ತಂದೆಯ ಆಶಯ

7

ಸಾಮೂಹಿಕ ಅತ್ಯಾಚಾರ: ಪುತ್ರಿಯ ಹೆಸರು ಬಹಿರಂಗ- ತಂದೆಯ ಆಶಯ

Published:
Updated:
ಸಾಮೂಹಿಕ ಅತ್ಯಾಚಾರ: ಪುತ್ರಿಯ ಹೆಸರು ಬಹಿರಂಗ- ತಂದೆಯ ಆಶಯ

ಲಂಡನ್ (ರಾಯಿಟರ್ಸ್): ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾದ ವಿದ್ಯಾರ್ಥಿನಿಯ ತಂದೆ ತಮ್ಮ ಪುತ್ರಿಯ ಹೆಸರನ್ನು ಬಹಿರಂಗ ಪಡಿಸಬೇಕು, ಇದರಿಂದ ಆಕೆ ಲೈಂಗಿಕ ಹಲ್ಲೆಗೆ ಗುರಿಯಾಗುವ ಇತರರಿಗೆ ಪ್ರತಿಭಟಿಸಲು ಸ್ಫೂರ್ತಿಯಾಗುತ್ತಾಳೆ ಎಂದು ಹೇಳಿದ್ದಾರೆ.ನವದೆಹಲಿಯಲ್ಲಿ ಚಲಿಸುತ್ತಿದ್ದ  ಬಸ್ಸಿನಲ್ಲಿ ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾದ 23ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿ ನಂತರ ಡಿಸೆಂಬರ್ 28ರಂದು ಸಿಂಗಾಪುರದಲ್ಲಿ ಅಸು ನೀಗಿದ್ದರು. ಈ ಘಟನೆ ದೇಶಾದ್ಯಂತ ಬೀದಿ ಬೀದಿ ಬೀದಿಗಳಲ್ಲಿ ಪ್ರತಿಭಟನೆಗೆ ಕಾರಣವಾಗಿತ್ತು. ಪ್ರತಿಭಟನೆಗಳ ಪರಿಣಾಮವಾಗಿ ತಪ್ಪಿತಸ್ಥರನ್ನು ಉಗ್ರಶಿಕ್ಷೆಗೆ ಗುರಿಪಡಿಸುವ ಭರವಸೆಯನ್ನು ಸರ್ಕಾರ ನೀಡಿತ್ತು.'ಜಗತ್ತಿಗೆ ಆಕೆಯ ನಿಜ ಹೆಸರು ಗೊತ್ತಾಗಬೇಕು' ಎಂದು ವಿದ್ಯಾರ್ಥಿನಿಯ ತಂದೆ ಬ್ರಿಟನ್ ನ ಸಂಡೇ ಪೀಪಲ್ ವೃತ್ತ ಪತ್ತಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.'ನನ್ನ ಮಗಳು ಯಾವುದೇ ತಪ್ಪನ್ನೂ ಮಾಡಿಲ್ಲ. ಸ್ವಯಂರಕ್ಷಣೆಗಾಗಿ ಹೋರಾಡುತ್ತಾ ಆಕೆ ಮಡಿದಿದ್ದಾಳೆ' ಎಂದು ಅವರು ನುಡಿದರು.

'ನನಗೆ ಆಕೆಯ ಬಗ್ಗೆ ಹೆಮ್ಮೆ ಇದೆ. ಆಕೆಯ ಹೆಸರನ್ನು ಬಹಿರಂಗ ಪಡಿಸುವುದರಿಂದ ಇಂತಹ ದಾಳಿಗಳಿಗೆ ತುತ್ತಾದ ಮಹಿಳೆಯರಿಗೆ ಧೈರ್ಯ ಲಭಿಸುವುದು. ಅವರೆಲ್ಲರೂ ನನ್ನ ಪುತ್ರಿಯಿಂದ ಶಕ್ತಿ ಪಡೆಯುವರು'  ಎಂದೂ ಅವರು ಹೇಳಿದರು.'ಹೆಸರು ಪ್ರಕಟಣೆಗೆ ತಂದೆ ಅನುಮತಿ ನೀಡಿದ್ದಾರೆ' ಎಂದು ಪ್ರತಿಪಾದಿಸಿದ ಪತ್ರಿಕೆಯು ತಂದೆ ಮತ್ತು ಮಗಳ ಹೆಸರನ್ನು ಪ್ರಕಟಿಸಿದೆ. ಆದರೆ ಕುಟುಂಬದ ಮನವಿ ಮೇರೆಗೆ ಆಕೆಯ ಭಾವಚಿತ್ರವನ್ನು ಪತ್ರಿಕೆ ಪ್ರಕಟಿಸಿಲ್ಲ.ಲೈಂಗಿಕ ಅಪರಾಧಗಳ ವಿರುದ್ಧ ರೂಪಿಸಲಾಗುವ ಹೊಸ ಕಾಯ್ದೆಗೆ ತಮ್ಮ ಪುತ್ರಿಯ ಹೆಸರನ್ನು ಆಕೆಯ ಗೌರವಾರ್ಥ ಇಡಬೇಕು ಎಂದು ಆಕೆಯ  ತಂದೆ ಈ ಹಿಂದೆಯೇ ಹೇಳಿದ್ದಾರೆ.ಅತ್ಯಾಚಾರಕ್ಕೆ ಗುರಿಯಾದವರ ಹೆಸರು ಬಹಿರಂಗ ಪಡಿಸುವುದರ ವಿರುದ್ಧ ಮಾಧ್ಯಮಗಳ ಮೇಲೆ ನಿಷೇಧ ಇರುವುದರಿಂದ ವಿದ್ಯಾರ್ಥಿನಿಯ ಹೆಸರು ಬಹಿರಂಗ ಪಡಿಸದೇ ಇರಲು ರಾಯಿಟರ್ಸ್ ತೀರ್ಮಾನಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry