ಸೋಮವಾರ, ಜೂನ್ 21, 2021
30 °C

ಸಾಮೂಹಿಕ ರಾಜೀನಾಮೆ: ಜಾರಕಿಹೊಳಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಈಗ ನಡೆದಿರುವ ಆಂತರಿಕ ಕಲಹ ನಿಲ್ಲಿಸದಿದ್ದರೆ 20 ಶಾಸಕರೊಡನೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಎಚ್ಚರಿಸಿದ್ದಾರೆ.ಇಲ್ಲಿಯ ವೈಕುಂಠ ಅತಿಥಿಗೃಹದಲ್ಲಿ ಸೋಮವಾರ ರಾತ್ರಿ ಸುದ್ದಿಗಾರರೊಡನೆ ಮಾತನಾಡಿದ ಅವರು, ಮಂಗಳವಾರ  ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಈಶ್ವರಪ್ಪ ಅವರನ್ನು ಬೆಳಿಗ್ಗೆ 11 ಗಂಟೆಗೆ ಭೇಟಿಯಾಗುವುದಾಗಿ ಹೇಳಿದರು.`ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಏಕೆ ಕೆಳಗಿಳಿಸಬೇಕು ಎಂಬುದನ್ನು ರಾಜ್ಯ ಘಟಕದ ಅಧ್ಯಕ್ಷರು ಸ್ಪಷ್ಟಪಡಿಸಬೇಕು. ಆಂತರಿಕ ಕಲಹ ಬಿಟ್ಟು ಪಕ್ಷದ ಶಿಸ್ತನ್ನು ಕಾಪಾಡಿಕೊಳ್ಳಬೇಕು. ಬಿಜೆಪಿ ಶಾಸಕರು ಎಂದು ನಾವು ಗೌರವದಿಂದ ಹೇಳಿಕೊಳ್ಳುವಂತಾಗಬೇಕು~ ಎಂದು ಜಾರಕಿಹೊಳಿ ಹೇಳಿದರು.`ನೀವು ನಮ್ಮ ಜೊತೆಗೆ ಬನ್ನಿ, ನಿಮಗೆ ಸಚಿವ ಸ್ಥಾನ ಕೊಡುತ್ತೇವೆ ಎಂದು ಯಡಿಯೂರಪ್ಪ ಬಣದವರು ದೂರವಾಣಿ ಮೂಲಕ ಮಾತನಾಡಿ ಆಮಿಷವೊಡ್ಡುತ್ತಿದ್ದಾರೆ~ ಎಂದು ಜಾರಕಿಹೊಳಿ ತಿಳಿಸಿದರು.`ಆಂತರಿಕ ಕಲಹ ಬಗೆಹರಿಸಬೇಕು, ನಿಗದಿಪಡಿಸಿದಂತೆ ಇದೇ ತಾ.21ರಂದು ಮುಖ್ಯಮಂತ್ರಿ ಸದಾನಂದಗೌಡ ಅವರು ಬಜೆಟ್ ಮಂಡಿಸಲು ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಯಡಿಯೂರಪ್ಪ ಬಣದವರು ಒಡ್ಡಿರುವ ಆಮಿಷ ಬಹಿರಂಗಪಡಿಸುತ್ತೇವೆ ಮತ್ತು 20 ಶಾಸಕರು ಸಾಮೂಹಿಕ ರಾಜೀನಾಮೆ ನೀಡುತ್ತೇವೆ~ ಎಂದು ಜಾರಕಿಹೊಳಿ ಎಚ್ಚರಿಸಿದರು.ಸೋಮವಾರ ರಾತ್ರಿಯೇ ಬೆಂಗಳೂರಿಗೆ ಪ್ರಯಾಣಿಸುವುದಾಗಿ ತಿಳಿಸಿದ ಅವರು, ತಮ್ಮಡನೆ ಯಾರ‌್ಯಾರು ಇದ್ದಾರೆಂಬುದನ್ನು ಬಹಿರಂಗಪಡಿಸಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.