ಮಂಗಳವಾರ, ಮೇ 11, 2021
24 °C

ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಹಟ್ಟಿ: ಇಂದಿನ ದುಬಾರಿ ದಿನಗಳಲ್ಲಿ ಸಾಮೂಹಿಕ ವಿವಾಹ ಆಗುವುದರಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕ ಬಹುದು ಎಂದು ಗಂಜಿಗಟ್ಟಿಯ ಚರ ಮೂರ್ತೀಶ್ವರಮಠದ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ಸಮೀಪದ ಪರಸಾಪುರ ಗ್ರಾಮದಲ್ಲಿ ಶರಣ ಬಸವೇಶ್ವರ ಪುರಾಣ ಮಂಗಲೋತ್ಸವ ನಿಮಿತ್ಯ ಈಚೆಗೆ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಆರ್ಶೀವಚನ ನೀಡಿದರು.ಅಡ್ನೂರಿನ ಪಂಚಾಕ್ಷರಿ ಶಿವಾ ಚಾರ್ಯ ಸ್ವಾಮೀಜಿ ಮಾತನಾಡಿದರು.ತಾರಿಕೊಪ್ಪದ ಸುಧಾನಂದ ಸ್ವಾಮಿ ಗಳು, ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಣ ರೊಟ್ಟಿಗವಾಡ, ವೀರಣ್ಣ ಅಂಗಡಿ, ವೀರಯ್ಯ ಮಠಪತಿ, ನೀಲಮ್ಮ ಬೋರಗಣ್ಣವರ, ಬಸವರಾಜ ರಾಯಾ ಪುರ, ಶೇಕಪ್ಪ ಮಲ್ಲಾಡದ, ಫಾಲಾಕ್ಷ ಈಳಿಗೇರ, ಎಂ.ಸಿ. ಮುಳಗುಂದ, ಜೆ.ಪಿ. ಮೆಣಸಿನಕಾಯಿ, ಶರಣಪ್ಪ ಈಳಿಗೇರ, ಈರಪ್ಪ ತಳವಾರ, ಕಲ್ಲಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.ಚಕ್ಕಡಿ ಓಡಿಸುವ ಸ್ಪರ್ಧೆಶಿರಹಟ್ಟಿ: ಸಮೀಪದ ಮಾಡಳ್ಳಿ ಗ್ರಾಮದ ಕರಿಯಮ್ಮ ದೇವಿ ಯುವಕ ಮಂಡಳದ ಆಶ್ರಯದಲ್ಲಿ ಏ.14ರಂದು ರಾಜ್ಯಮಟ್ಟದ ಖಾಲಿ ಚಕ್ಕಡಿ ಓಡಿಸುವ ಸ್ಪರ್ಧೆ ಜರುಗಲಿದೆ.ಪ್ರಥಮ ಬಹುಮಾನ 10 ಗ್ರಾಂ. ಚಿನ್ನ ಮತ್ತು 5001 ರೂಪಾಯಿ ನಗದು, ದ್ವಿತೀಯ ಬಹುಮಾನ 5 ಗ್ರಾಂ. ಚಿನ್ನ ಮತ್ತು 2001 ರೂಪಾಯಿ ನಗದು ಹಾಗೂ 2.5ಗ್ರಾಂ ಚಿನ್ನ ಮತ್ತು 1001 ರೂಪಾಯಿ ತೃತೀಯ ಬಹು ಮಾನ ಸೇರಿದಂತೆ ಒಟ್ಟು 13 ಬಹುಮಾನಗಳನ್ನು ನೀಡಲಾಗುವುದು.ವಿವರಗಳಿಗಾಗಿ 8970855889, 9972598857 ಅಥವಾ 9886  343332 ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.