ಶನಿವಾರ, ಮೇ 8, 2021
26 °C

`ಸಾಮೂಹಿಕ ವಿವಾಹದಿಂದ ದುಂದುವೆಚ್ಚ ಕಡಿತ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವನಬಾಗೇವಾಡಿ: ವರದಕ್ಷಿಣೆ ಪಿಡುಗನ್ನು ತೊಡೆದು ಹಾಕಲು ಸಾಮೂಹಿಕ ವಿವಾಹಗಳು ಸಹಾಯಕ ವಾಗಲಿವೆ. ಇದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ಕಟ್ಟಿಮನಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಡೋಣೂರ ಗ್ರಾಮದ ಗುರುಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.ಗಂಡ ದುಡಿದು ಹೆಂಡತಿಯನ್ನು ಸಾಕಬೇಕೇ ವಿನಹಃ ಆಕೆಯನ್ನು ಯಾವ ಕಾಲಕ್ಕೂ ಪೀಡಿಸಬಾರದು. ಹೆಂಡತಿ ಕುಟುಂಬ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಜೀವನ ನಡೆಸಬೇಕು. ಆಗ ಕುಟುಂಬದಲ್ಲಿ ಸಾಮರಸ್ಯ ಮೂಡುತ್ತದೆ ಎಂದರು.ಕೆಜೆಪಿ ಮುಖಂಡ ಸಂಗರಾಜ ದೇಸಾಯಿ ಮಾತನಾಡಿ  ರೈತರಿಗೆ ವರುಣ ದೇವರು ಕೃಪೆ ತೊರಿದ್ದಾರೆ.  ಹಲವೆಡೆ ಬಿತ್ತನೆಗೆ ಅವಕಾಶ ಮಾಡಿ ಕೊಟ್ಟಿದ್ದು ರೈತರಿಗೆ ಸಂತಸದ ಸಂಗತಿಯಾಗಿದೆ ಎಂದರು. ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾ ಚಾರ್ಯರು ಸಾನಿಧ್ಯ ವಹಿಸದ್ದರು. ಕಾರ್ಯಕ್ರಮದಲ್ಲಿ ವಡವಡಗಿಯ ಭೃಂಗೀಶ ಶಿವಾಚಾರ್ಯ ಸ್ವಾಮೀಜಿ, ಮಸಬಿನಾಳದ  ಸಿದ್ಧರಾಮ ಶಿವಯೋಗಿ ಸ್ವಾಮೀಜಿ, ತಡವಲಗಾದ  ರಾಚೋಟಿಶ್ವರ ಸ್ವಾಮೀಜಿ,  ವೃಷಭಲಿಂಗೇಶ್ವರ ಸ್ವಾಮೀಜಿ,  ಅಭಿನವ ಮುರುಘೇಂದ್ರ ಸ್ವಾಮೀಜಿ, ಗ್ರಾ.ಪಂ ಅಧ್ಯಕ್ಷ ಮಹದೇವಪ್ಪ ಬಾಲಪ್ಪಗೋಳ, ಜಿ.ಪಂ. ಸದಸ್ಯ ಚಂದ್ರಶೇಖರಗೌಡ ಪಾಟೀಲ, ಮುಖಂಡರಾದ ಎ.ಎಂ.ಪಾಟೀಲ(ಉಕ್ಕಲಿ), ಬಿಜೆಪಿ ಬ್ಲಾಕ್ ಘಟಕದ ಅಧ್ಯಕ್ಷ ಸಂಗನಗೌಡ ರಾಯಗೊಂಡ ಇತರರು ಉಪಸ್ಥಿತರಿದ್ದರು.ಸಿದ್ರಾಮ ಹಳ್ಳಿ ಸ್ವಾಗತಿಸಿದರು. ಎಸ್.ಎಂ.ದುಂಬಾಳಿ ವಂದಿಸಿದರು. ಪಿ.ಎಚ್. ಸೋನ್ನದ ಕಾರ್ಯಕ್ರಮ ನಿರೂಪಿಸಿದರು. ಸಾಮೂಹಿಕ ವಿವಾಹ ದಲ್ಲಿ 17 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜಾತ್ರೆಯ ಅಂಗವಾಗಿ ಶಿವದೀಕ್ಷಾ, ಅಗ್ನಿಶಮನ, ಮಹಾಪ್ರಸಾದ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.