ಗುರುವಾರ , ಜೂನ್ 24, 2021
25 °C

ಸಾಮೂಹಿಕ ವಿವಾಹ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರೂರ: ದುಬಾರಿ ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಬಡ ಜನತೆಯ ಪಾಲಿಗೆ ಮದುವೆಗಳು ಅಧಿಕ ಹೊರೆ ಯಾಗುತ್ತಿವೆ. ಸರಳವಾಗಿ ಜರುಗುವ ಸಾಮೂಹಿಕ ವಿವಾಹಗಳು ಆಧುನಿಕ ಜೀವನದಲ್ಲಿ ಬಡ ಜನತೆಯ ಪಾಲಿಗೆ ವರದಾನ ಆಗಿವೆ ಎಂದು  ಬದಾಮಿ ಶಾಸಕ ಎಂ. ಕೆ. ಪಟ್ಟಣಶೆಟ್ರ ಅಭಿಪ್ರಾಯಪಟ್ಟರು.ಮುಷ್ಟಿಗೇರಿಯಲ್ಲಿ  ಕನ್ನೂರ  ಸಿದ್ಧಲಿಂಗ ಶಿವಯೋಗಿಗಳ 72ನೇ ಪುಣ್ಯಾರಾಧನೆ ಸಪ್ತಾಹ, ರಥೋತ್ಸವ  ನಿಮಿತ್ತ  ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಾನ್ನಿಧ್ಯ ವಹಿಸಿದ್ದ ಬಾಗಲಕೋಟೆ ವಿಶ್ವರಾಜೇಂದ್ರ ಸ್ವಾಮೀಜಿ, ಬದುಕಿನಲ್ಲಿ ಮನುಜ ಬಿಂಬಿಸುವ ಉತ್ತಮ ಸಂ ಸ್ಕಾರ, ಸಂಸ್ಕೃತಿ ಹಾಗೂ ದಾನ, ಧರ್ಮ ಗಳಂಥ ಪುಣ್ಯ  ಕಾರ್ಯಗಳಿಂದ ಸಮಾಜದಲ್ಲಿ ಗುರುತರ ಸ್ಥಾನ ಗಳಿಸುತ್ತಾನೆ.  ಹೊಸ ಬದುಕಿಗೆ ಕಾಲಿಟ್ಟ ದಂಪತಿಗಳು, ಆದರ್ಶ ಬದುಕು ಸಾಗಿಸಬೇಕು ಎಂದು  ಆಶೀರ್ವಚನ ನೀಡಿದರು.ಸಾನ್ನಿಧ್ಯ  ವಹಿಸಿದ್ದ ಕೆರೂರ ಚರಂತಿಮಠದ ಡಾ.ಶಿವುಕುಮಾರ ಸ್ವಾಮೀಜಿ, ಗ್ರಾಮಾಂತರ ಪ್ರದೇಶದಲ್ಲಿ ಜನಪ್ರಿಯ ಆಗಿರುವ ಸಾಮೂಹಿಕ ವಿವಾಹಗಳು ಬಡ ಜನತೆಯ ಬದುಕಲ್ಲಿ ನೆಮ್ಮದಿ ತಂದಿವೆ ಎಂದರು.ಜಿ.ಪಂ. ಸದಸ್ಯ ಎನ್.ಎಸ್.  ಬೊಮ್ಮನಗೌಡ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿವನಾಗಯ್ಯ ಹಿರೇಮಠ, ತಹಸೀಲ್ದಾರ ಮಹೇಶ ಕರ್ಜಗಿ, ಜಿ.ಪಂ. ಸದಸ್ಯೆ ವೀಣಾ ಎಮ್ಮಿ, ಚಿಕ್ಕಮಕ್ಕಳ ತಜ್ಞ ವೈದ್ಯ ದೇವರಾಜ ಪಾಟೀಲ, ತಾ.ಪಂ.  ಉಪಾಧ್ಯಕ್ಷ ತಾಯಪ್ಪ ಮಾದರ, ಸದಸ್ಯೆ ವಿಜಯಲಕ್ಷ್ಮಿ  ಪೂಜಾರ, ಗ್ರಾ.ಪಂ.  ಅಧ್ಯಕ್ಷ ಯಲ್ಲಪ್ಪ ಯಲ್ಲನಾಯ್ಕರ, ಪ್ರಕಾಶ ಎಮ್ಮಿ   ಉಪಸ್ಥಿತರಿದ್ದರು.ಸುಮಾರು 20 ಜೋಡಿಗಳ ದಾಂಪತ್ಯ ಜೀವನಕ್ಕೆ ಕಾಲಿಟ್ಟವು.   ಸಂಜೆ ಮಹಾಯೋಗಿ ಸಿದ್ಧಲಿಂಗ ಶಿವಯೋಗಿಗಳ ಪುಣ್ಯಾರಾಧನೆ ನಿಮಿತ್ತ  ಜರುಗಿದ ರಥೋತ್ಸವ ಸಹಸ್ರಾರು ಭಕ್ತಾದಿಗಳ  ಹಷೋದ್ಘಾರಗಳ ಮಧ್ಯೆ ವಿಜೃಂಭಣೆಯಿಂದ ನೆರವೇರಿತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.