ಸಾಮೂಹಿಕ ವಿವಾಹ ಹೆಚ್ಚು ಜನಪ್ರಿಯವಾಗಲಿ: ಬಚ್ಚೇಗೌಡ

7

ಸಾಮೂಹಿಕ ವಿವಾಹ ಹೆಚ್ಚು ಜನಪ್ರಿಯವಾಗಲಿ: ಬಚ್ಚೇಗೌಡ

Published:
Updated:

ಹೊಸಕೋಟೆ: `ಅದ್ಧೂರಿ ಮದುವೆ ಮಾಡಿದ ನಂತರ ಪೋಷಕರು ಸಾಲದ ಹೊರೆಯಿಂದ ತೊಂದರೆಗೊಳಗಾಗುವುದನ್ನು ತಪ್ಪಿಸಲು ಸಾಮೂಹಿಕ ವಿವಾಹಗಳು ಹೆಚ್ಚು ಜನಪ್ರಿಯವಾಗಬೇಕು~ ಎಂದು ಸಚಿವ ಬಿ.ಎನ್. ಬಚ್ಚೇಗೌಡ ಅವರು ಹೇಳಿದರು.ತಾಲ್ಲೂಕಿನ ಅನುಪಹಳ್ಳಿ ಗ್ರಾಮದಲ್ಲಿ ವಿಶ್ವ ಭಾವೈಕ್ಯತಾ ಟ್ರಸ್ಟ್ ಮತ್ತು ಈಶ್ವರ್ ಸ್ನೇಹಿತರ ಕೂಟ ಇತ್ತೀಚೆಗೆ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಗ್ರಾಮದಲ್ಲಿನ ಆಂಜನೇಯಸ್ವಾಮಿ ಮತ್ತು ಮುನೇಶ್ವರಸ್ವಾಮಿ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.  ವಿವಾಹ ಸಮಾರಂಭದಲ್ಲಿ ವಧು-ವರರಿಗೆ ಮುಸ್ಲಿಂ ಬಾಂಧವರು ಕೂಡ ಕೊಡುಗೆ ನೀಡಿರುವುದನ್ನು ಶ್ಲಾಘಿಸಿದ ಸಚಿವರು, ಸಾಮೂಹಿಕ ವಿವಾಹಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾಗುವವರಿಗೆ ಹತ್ತು ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದೆ ಎಂದು  ತಿಳಿಸಿದರು.ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಎನ್.ಗೋಪಾಲಗೌಡ, ದಲಿತ ಕ್ರಿಯಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಚಿ.ನಾ.ರಾಮು, ಮುಖಂಡ ಎ.ಎಂ.ಶ್ರೀನಿವಾಸಯ್ಯ ಮಾತನಾಡಿದರು.ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ವಿ.ರಾಜಶೇಖರಗೌಡ ಅಧ್ಯಕ್ಷತೆ ವಹಿಸಿದ್ದರು. ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ವಿ. ಸತೀಶ್‌ಗೌಡ, ದೇವಸ್ಥಾನ ಸಮಿತಿ ಅಧ್ಯಕ್ಷ ಎ.ಎನ್. ದೊಡ್ಡನಾರಾಯಣಪ್ಪ, ಎ.ಜಿ. ಮುನಿಶಾಮಪ್ಪ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry