ಶುಕ್ರವಾರ, ಜೂನ್ 18, 2021
28 °C

ಸಾಮೂಹಿಕ ಸೀಮಂತದಿಂದ ಸಹಬಾಳ್ವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ:ಪ್ರತಿ ಮಹಿಳೆಯ ಜೀವನದಲ್ಲಿ ಒಮ್ಮೆ ಬರುವ ಸೀಮಂತ ಕಾರ್ಯ ವನ್ನು ಅವರವರ ಮನೆಯಲ್ಲಿ ಆಚರಿಸು ವುದು ಹಿಂದಿನಿಂದಲೂ ನಡೆಸಿಕೊಂಡ ಬಂದ ಸಂಪ್ರದಾಯ. ಆದರೆ, ಬಡ ಹಾಗೂ ಶ್ರೀಮಂತ ಎಂಬ ಬೇಧವಿಲ್ಲದೇ ಒಂದೇ ವೇದಿಕೆಯಲ್ಲಿ ಸರ್ಕಾರ ಆಯೋ ಜಿಸಿರುವ ಸೀಮಂತ ಕಾರ್ಯಕ್ರಮ ಸಹಬಾಳ್ವೆಯ ಸಂಕೇತವಾಗಿದೆ ಎಂದು ಶಾಸಕ ನೆಹರೂ ಓಲೇಕಾರ ಹೇಳಿದರು. ಹೊಸರಿತ್ತಿಯಲ್ಲಿ ಜಿ  ಪಂ ಹಾಗೂ ಹೊಸರಿತ್ತಿಯ ಪ್ರಾಥಮಿಕ ಆರೋಗ್ಯ ಘಟಕದ ಆಶ್ರಯದಲ್ಲಿ ನಡೆದ ಸಾಮೂಹಿಕ ಸೀಮಂತ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ಇಂದಿನ ದಿನಗಳಲ್ಲಿ ಸೀಮಂತ ಆಚರಣೆ ಬಡ ಜನರಿಗೆ ಕಷ್ಠದ ಕೆಲಸ ವಾಗಿತ್ತು. ಆದರೆ ಸರ್ಕಾರ ಆಯೋಜಿ ಸಿರುವ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ 113 ಗರ್ಭಿಣಿ ಮಹಿಳೆ ಯರು ಭಾಗವಹಿಸಿರುವುದು ಸಂತಸ ತಂದಿದೆ.

 

ಯೋಜನೆ ಯ ಸದು ಪಯೋಗ ಪಡೆದು ಕೊಳ್ಳಲು ಮುಂದಾಗಿರುವುದು ಶ್ಲಾಘನೀಯ ಎಂದರು. ಡಾ. ಬಸವರಾಜ ಸಜ್ಜನರ ಮಾತನಾಡಿ, ಮಹಿಳೆಯರಿಗೆ ಹರಿಗೆಯನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಮಾಡಬಾರದು. ಈ ಸಂದರ್ಭದಲ್ಲಿ ಸ್ವಲ್ಪ ಅಜಾಗರೂಕತೆ ವಹಿಸಿದರೆ ತಾಯಿ ಹಾಗೂ ಮಗುವಿಗೆ ತೊಂದರೆ ತಪ್ಪಿದಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ಸೌಕರ್ಯ ಗಳಿದ್ದು, ತಾಯಿ ಹಾಗೂ ಮಗುವಿನ ಜೀವನದ ಹಿತದೃಷ್ಟಿಯಿಂದ ಪ್ರತಿಯೊ ಬ್ಬರು ಆಸ್ಪತ್ರೆಯಲ್ಲಿಯೇ ಹರಿಗೆ ಮಾಡಿಸಬೇಕೆಂದು ಸಲಹೆ ಮಾಡಿದರು.ಪ್ರಾಸ್ತಾವಿಕ ಮಾತನಾಡಿದ ಡಾ. ಲೋಹಿತ ಪಿ.ಎಸ್, ತಾಯಂದಿರಿಗೆ ಚೊಚ್ಚಲ ಹೆರಿಗೆಯ ಕುರಿತು ಹಾಗೂ ಮಗುವಿನ ಸಂರಕ್ಷಣೆಯ ಬಗೆಗೆ ಗರ್ಭಿಣಿ ಮಹಿಳೆಯರಿಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ 113 ಗರ್ಭಿಣಿ ಮಹಿಳೆಯರಿಗೆ ಹೂವು, ಕುಂಕುಮ, ಅರಿಶಿನ, ಹಸಿರುವ ಬಳೆ ಗಳನ್ನು ಹಾಗೂ ಉಚಿತವಾಗಿ ಸೀರೆ, ಔಷಧಿ ಮಾತ್ರೆ ವಿತರಿಸಲಾಯಿತು.ಜಿಲ್ಲಾ ಆರೋಗ್ಯಾಧಿಕಾರಿ ಈಶ್ವರ ಮಾಳೊದೆ ಹಾಗೂ ಕಿರಿಯ ಆರೋಗ್ಯ ಪುರುಷ ಸಹಾಯಕ ಅಧಿಕಾರಿ ಬಿ.ಎಸ್. ಚಲ್ಲಾಳರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಯಲ್ಲವ್ವ ಚಪ್ಪರದ, ತಾ.ಪಂ ಸದಸ್ಯೆ, ಸುಮಾ ಎಕಬೋಟೆ, ಗ್ರಾ.ಪಂ ಅಧ್ಯಕ್ಷ ಬಸವರಾಜ ಕಂಟೆಣ್ಣನವರ, ಐ.ಜಿ. ಕೋರಿ, ಚನ್ನವೀರಯ್ಯ ಹಾವೇರಿಮಠ, ಮಲ್ಲಣ್ಣ ಅಂಕಲಕೋಟಿ, ಮುತ್ತಯ್ಯ ಕಿತ್ತೂರ ಮಠ, ಮೌನೇಶ ಬಡಿಗೇರ, ಮಹಾಂತೇಶ ಇಟಗಿ, ಗಿರೀಶ ಅಂಕಲಕೋಟಿ ಸೇರಿದಂತೆ ಇತರರು ಹಾಜರಿದ್ದರು.ಗಿರಿಜಾ ಅಡರಕಟ್ಟಿ ಪ್ರಾರ್ಥಿಸಿದರು. ಕೆ.ಸಿ.ಕೋರಿ ಸ್ವಾಗತಿಸಿದರು. ಸಿದ್ದರಾಜ ಕಲಕೋಟಿ ನಿರೂಪಿಸಿದರು. ಸುಮಾ ಎಕಬೋಟೆ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.